ಹೊಸಕೋಟೆಯಲ್ಲಿ ನಿಲ್ಲದ ಆನೆಗಳ ಉಪಟಳ ... ಓರ್ವ ವ್ಯಕ್ತಿ ಬಲಿ - ಹೊಸಕೋಟೆ
🎬 Watch Now: Feature Video
ಕಳೆದ ಮೂರು ತಿಂಗಳಿನಿಂದ ಬೆಂಗಳೂರು ಸುತ್ತಮುತ್ತಲಿನ ಗಡಿ ಪ್ರದೇಶದಲ್ಲಿ ಎರಡು ಆನೆಗಳು ಬೀಡು ಬಿಟ್ಟಿದ್ದು, ರಾತ್ರಿಯಾದರೆ ಸಾಕು ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ತಿಂದು ಹಾಳು ಮಾಡುತ್ತಿವೆ. ಇದರಿಂದ ಆನೆಗಳನ್ನು ಕಾಡಿಗಟ್ಟಲು ಗ್ರಾಮಸ್ಥರು ಮುಂದಾಗಿದ್ದರು. ಈ ವೇಳೆ ಆನೆಯೊಂದು ವ್ಯಕ್ತಿಯನ್ನು ಬಲಿ ತೆಗೆದುಕೊಂಡಿದೆ. ಬೆಂಗಳೂರು ಹೊರವಲಯ ಹೊಸಕೋಟೆಯ ತಿರುವರಂಗ ಗ್ರಾಮದ ಬಳಿ ಘಟನೆ ನಡೆದಿದ್ದು, ಅಣ್ಣಯಪ್ಪ ಆನೆ ದಾಳಿಗೆ ಬಲಿಯಾದ ವ್ಯಕ್ತಿ. ಎರಡು ಆನೆಗಳು ಈಗಾಗಲೆ 6 ಜನರನ್ನು ಬಲಿ ಪಡೆದಿದ್ದು, ಆನೆಗಳು ಕಾಡಿನಿಂದ ನಾಡಿಗೆ ಬರದಂತೆ ಕಾಡುಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು. ಜೊತೆಗೆ ತಡೆಗೋಡೆ ನಿರ್ಮಿಸಿಬೇಕು ಎಂದು ಅರಣ್ಯ ಇಲಾಖೆಗೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.