ಸಾರಿಗೆ ನೌಕರರ 4 ದಿನದ ಮುಷ್ಕರದಿಂದ ಬಿಎಂಟಿಸಿಗೆ 9 ಕೋಟಿ ರೂ. ನಷ್ಟ: ರಾಜೇಶ್
🎬 Watch Now: Feature Video
ಬೆಂಗಳೂರು: ನಾಲ್ಕು ದಿನಗಳ ಸಾರಿಗೆ ನೌಕರರ ಮುಷ್ಕರದಿಂದ ಬಿಎಂಟಿಸಿಗೆ 9 ಕೋಟಿ ರೂ. ನಷ್ಟವಾಗಿದೆ ಎಂದು ಬಿಎಂಟಿಸಿ ಸಂಚಾರ ವಿಭಾಗದ ಮುಖ್ಯಸ್ಥ ರಾಜೇಶ್ ತಿಳಿಸಿದ್ದಾರೆ. ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಮುಷ್ಕರ ಕೈಗೊಂಡಿದ್ದರು. ಮುಷ್ಕರದ ವೇಳೆ ನಿತ್ಯ 120-130 ಬಸ್ಗಳು ಕಾರ್ಯಾಚರಣೆ ಮಾಡುತ್ತಿದ್ದವು. ನಿನ್ನೆ ಸಂಜೆ ಮುಷ್ಕರ ಅಂತ್ಯವಾದ ಬಳಿಕ ಎಲ್ಲಾ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಬೆಳಗ್ಗೆಯಿಂದ 4,000 ಸಾವಿರ ಬಸ್ಗಳು ಸಂಚಾರ ಮಾಡುತ್ತಿದ್ದು, ಇಂದಿನಿಂದ 5,000 ಬಸ್ಗಳು ಸಂಚರಿಸುತ್ತಿವೆ. ಮುಷ್ಕರದ ವೇಳೆ 23 ಬಸ್ಗಳ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.