ಚುರುಮುರಿ ತಿಂದು 26 ಗಂಟೆ ಮನೆ ಮಾಳಿಗೆ ಮೇಲೆ ಕುಳಿತರು! ಪ್ರವಾಹದಿಂದ 80 ವರ್ಷದ ಅಜ್ಜಿಯ ರಕ್ಷಣೆ
🎬 Watch Now: Feature Video
ಗದಗ: ಮಲಪ್ರಭಾ ನದಿ, ಬೆಣ್ಣೆ ಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 80 ವರ್ಷದ ಅಜ್ಜಿಯನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ. ಚೆನ್ನಮ್ಮ ಬದುಕುಳಿದ ಅಜ್ಜಿ. ಮಲಪ್ರಭಾ ನದಿ, ಬೆಣ್ಣೆ ಹಳ್ಳಗಳಲ್ಲಿನ ಪ್ರವಾಹದಲ್ಲಿ ಸುಮಾರು 26 ಗಂಟೆಗಳ ಕಾಲ ಸಿಲುಕಿದ್ದ ಈ ಅಜ್ಜಿಯನ್ನು ರಕ್ಷಿಸಲಾಗಿದೆ. ಸತತ 26 ಗಂಟೆ ಮನೆಯ ಮಾಳಿಗೆ ಮೇಲೆ ಕುಳಿತ ಇವರು ಚುರುಮುರಿ ತಿಂದು ಜೀವ ಉಳಿಸಿಕೊಂಡಿದ್ದರು ಎಂಬ ಮಾಹಿತಿ ಇದೆ. ಇನ್ನು ಬದುಕಿ ಬಂದ ಅಜ್ಜಿ ರಕ್ಷಣೆ ಮಾಡಿದವರಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿರೋ ದೃಶ್ಯ ಎಂಥವರಲ್ಲೂ ಕಂಬನಿ ತರಿಸುತ್ತದೆ.