ಕುಡಿದು ವಾಹನ ಸವಾರರೇ ಎಚ್ಚರ ಎಚ್ಚರ... ಕಾಯ್ದೆ ಜಾರಿಯಾದ ಮೊದಲ ದಿನವೇ ಬಿತ್ತು ಇಷ್ಟೊಂದು ಕೇಸ್ - new Motor Act
🎬 Watch Now: Feature Video
ಹುಬ್ಬಳ್ಳಿ: ನೂತನ ಮೋಟಾರ್ ಕಾಯ್ದೆ ಜಾರಿ ಬಂದ ದಿನವೇ ಹುಬ್ಬಳ್ಳಿ- ಧಾರವಾಡ ಸಂಚಾರಿ ಪೊಲೀಸರು, ನಿನ್ನೆ ಒಂದೇ ದಿನಕ್ಕೆ 36 ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು ಮಾಡಿದ್ದಾರೆ. ಪ್ರತಿ ಕೇಸ್ಗೂ 10 ಸಾವಿರ ಪ್ರತ್ಯೇಕ ದಂಡ ವಸೂಲಿ ಮಾಡಿ, 3.60 ಲಕ್ಷ ಫೈನ್ ಸಂಗ್ರಹಿಸಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆ,ಕಾರ್ಯಾಚರಣೆಗಿಳಿದ ಪೊಲೀಸರು, ಉತ್ತರ ಸಂಚಾರಿ ಠಾಣೆಯಲ್ಲಿ 6, ದಕ್ಷಿಣ ಸಂಚಾರಿ ಠಾಣೆಯಲ್ಲಿ 8, ಪೂರ್ವ ಸಂಚಾರಿ ಠಾಣೆಯಲ್ಲಿ 14 ಹಾಗೂ ಧಾರವಾಡ ಸಂಚಾರಿ ಠಾಣೆಯಲ್ಲಿ 9 ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Sep 2, 2019, 7:43 PM IST