ವಿಶ್ವ ವಿಜೇತರಾಗಲು ಇನ್ನೊಂದೇ ಮೆಟ್ಟಿಲು... ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ ಅಭಿಮಾನಿಗಳು - semifinal
🎬 Watch Now: Feature Video
ವಿಶ್ವಕಪ್ ಮಹಾಟೂರ್ನಿ ಅಂತಿಮ ಹಂತ ತಲುಪಿದೆ. ಈಗಾಗಲೇ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ನಾಲ್ಕು ಬಲಾಢ್ಯ ತಂಡಗಳು ಸೆಮಿಫೈನಲ್ ಸೇರಿಕೊಂಡಿವೆ. ಸೆಮೀಸ್ ಸೇರಿರುವ ತಂಡಗಳಲ್ಲಿ ಭಾರತವೇ ಬಲಿಷ್ಠವಾಗಿದ್ದು, ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗುವ ಭರವಸೆ ಮೂಡಿಸಿದೆ. ಬಲಿಷ್ಠ ತಂಡವಾಗಿ ವಿಶ್ವಕಪ್ ಟೂರ್ನಿ ಆರಂಭಿಸಿದ ಟೀಂ ಇಂಡಿಯಾ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡುತ್ತಿದೆ. ಲೀಗ್ ಹಂತದಲ್ಲಿ ಎಲ್ಲಾ ತಂಡಗಳಿಗೂ ಸೋಲಿನ ರುಚಿ ತೋರಿಸಿದ ಬ್ಲೂ ಬಾಯ್ಸ್.. ಅನಿರೀಕ್ಷಿತವಾಗಿ ಆಂಗ್ಲರ ವಿರುದ್ಧ ಸೋಲೊಪ್ಪಿಕೊಂಡಿದ್ರು. ಆದರೆ ಟೂರ್ನಿಯಲ್ಲಿ ಭಾರತ ತಂಡ ಇದುವರೆಗೂ ನೀಡಿರುವ ಪ್ರದರ್ಶನ ಅಭಿಮಾನಿಗಳಲ್ಲಿ ಹೊಸ ಆಸೆಯನ್ನ ಚಿಗುರಿಸಿದೆ.