ಫೋಟೋ ತೆಗೆಯಲು ಕಾಡಿನೊಳಗೆ ಹೋದ ಯುವಕನ ಬೆನ್ನಟ್ಟಿದ ಆನೆ: ವಿಡಿಯೋ

🎬 Watch Now: Feature Video

thumbnail

By

Published : Jun 7, 2023, 9:34 PM IST

ವಯನಾಡು (ಕೇರಳ) : ಫೋಟೊ ತೆಗೆಯಲು ಕಾಡಿನೊಳಗೆ ಹೋದ ಯುವಕನನ್ನು ಕಾಡಾನೆ ಬೆನ್ನಟ್ಟಿಕೊಂಡು ಬಂದಿರುವ ಘಟನೆ ವಯನಾಡ್ ಜಿಲ್ಲೆಯ ಮುತ್ತಂಗ ವನ್ಯಜೀವಿ ಅಭಯಾರಣ್ಯದಲ್ಲಿ ನಡೆದಿದೆ. ಕಳೆದ ಸೋಮವಾರ ಸಂಜೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ತಮಿಳುನಾಡಿನ ಯುವಕ ಇಲ್ಲಿನ ವನ್ಯಜೀವಿ ಅಭಯಾರಣ್ಯಕ್ಕೆ ಬಂದಿದ್ದು, ಈ ವೇಳೆ ಕಾಡಾನೆಯ ಫೋಟೋ ತೆಗೆಯಲು ಅಭಯಾರಣ್ಯದ ಕಾಡಿನೊಳಗೆ ತೆರಳಿದ್ದಾನೆ. ಈ ಸಂದರ್ಭದಲ್ಲಿ ಕಾಡಾನೆಯು ಯುವಕನನ್ನು ಬೆನ್ನಟ್ಟಿಕೊಂಡು ಬಂದಿದೆ. ಇತರೆ ವಾಹನದಲ್ಲಿದ್ದ ಪ್ರವಾಸಿಗರು ಗದ್ದಲ ಮಾಡಿದ್ದು, ಕಾಡಾನೆ ಬೆದರಿ ಹಿಂದೆ ಸರಿಯಿತು. ಇದರಿಂದಾಗಿ ಯುವಕ ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಲ್ಲದೇ ಅರಣ್ಯ ಇಲಾಖೆಯು ಯುವಕನಿಗೆ 4,000 ಸಾವಿರ ರೂ ದಂಡ ವಿಧಿಸಿದೆ. ಜೊತೆಗೆ ಯುವಕನ ವಾಹನವನ್ನು ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ. ಪ್ರವಾಸಕ್ಕೆ ಬಂದವರು ಈ ರೀತಿ ಹುಚ್ಚಾಟ ನಡೆಸುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ.

ಇದನ್ನೂ ಓದಿ : 3 ದಿನಗಳ ಸತತ ಕಾರ್ಯಾಚರಣೆ: ಕಡಬದಲ್ಲಿ ನರಹಂತಕ ಕಾಡಾನೆ ಸೆರೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.