ತುಮಕೂರು: ಹಾಡಹಗಲೇ ಯುವಕನೊಬ್ಬನ ಮೇಲೆ ಮಾರಾಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ- ವಿಡಿಯೋ - ಕುಣಿಗಲ್ ಪೊಲೀಸ್ ಠಾಣೆ
🎬 Watch Now: Feature Video
ತುಮಕೂರು: ಹಾಡಹಗಲೇ ಕುಣಿಗಲ್ ಪಟ್ಟಣದಲ್ಲಿ ಸಿನೆಮಾ ರೀತಿಯಲ್ಲಿ ಮಚ್ಚು, ಲಾಂಗ್ಗಳಿಂದ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಯುವಕನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. ಬೈಕ್ನಲ್ಲಿ ಬಂದಂತಹ ನಾಲ್ವರು ಯುವಕರು ಹಾಡಹಗಲೇ ಲಾಂಗ್ಗಳನ್ನು ಹಿಡಿದು ಕುಣಿಗಲ್ ಪಟ್ಟಣದ ಎಲ್ ಐ ಸಿ ಕಚೇರಿ ಮುಂಭಾಗದಲ್ಲಿ ಹಲ್ಲೆ ಮಾಡಿದ್ದಾರೆ.
ಇನ್ನು ಈ ದೃಶ್ಯವನ್ನು ಕಂಡ ಪ್ರತ್ಯಕ್ಷ ದೃಶ್ಯಗಳು ಕ್ಷಣಕಾಲ ದಂಗಾಗಿ ಹೋಗಿದ್ದಾರೆ. ಮೇಸ್ತ್ರಿ ಗೌಡನ ಪಾಳ್ಯದ ಜಗದೀಶ್ ಅಲಿಯಾಸ್ ಜಗ್ಗ ಎಂಬುವವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಕೂತರಹಳ್ಳಿ ಗ್ರಾಮದ ಆಕಾಶ್, ಚಿಕ್ಕಣ್ಣ, ಶ್ರೀನಿವಾಸ್ ಆರೋಪಿಗಳು. ಇನ್ನು ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಗದೀಶ್ನನ್ನು ಸ್ಥಳೀಯರು ಆದಿ ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಹಲ್ಲೆಗೊಳಗಾದ ಜಗದೀಶ್ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಂಬಂಧಪಟ್ಟ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಬ್ ಇನ್ಸ್ಪೆಕ್ಟರ್ನನ್ನು ಗುಂಡಿಕ್ಕಿ ಕೊಲೆ ಮಾಡಿದ ಅಪರಿಚಿತ ದುಷ್ಕರ್ಮಿಗಳು!