ಅಪ್ಪ-ಮಗನ ತಲೆಯಲ್ಲಿ ಅರಳಿದ 'ವಿಶ್ವಕಪ್': ಟೀಂ ಇಂಡಿಯಾಗೆ ಹೀಗೊಂದು ವಿಶ್!
🎬 Watch Now: Feature Video
Published : Nov 19, 2023, 4:20 PM IST
ಚಾಮರಾಜನಗರ: ಏಕದಿನ ವಿಶ್ವಕಪ್ ಫೈನಲ್ ಆರಂಭವಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಅಂತಿಮ ಕದನ ನಡೆಯುತ್ತಿದೆ. ಟೀಂ ಇಂಡಿಯಾ ಗೆಲುವಿಗೆ ದೇಶಾದ್ಯಂತ ಪೂಜೆ, ಹೋಮ, ಹವನಗಳು ನಡೆಯುತ್ತಿವೆ. ಕ್ರಿಕೆಟ್ ಅಭಿಮಾನಿಗಳು ಭಾರತ ಗೆಲ್ಲಲಿ ಎಂದು ಶುಭ ಹಾರೈಸುತ್ತಿದ್ದಾರೆ.
ಅಂತೆಯೇ, ಚಾಮರಾಜನಗರದ ಗುರು ಹಾಗೂ ಅವರ ಪುತ್ರ ಪ್ರತ್ಯೇಕ್ಷ್ ಎಂಬವರು ತಾವೇ ವಿಶ್ವಕಪ್ ಮಾದರಿಯ ಕಿರೀಟವನ್ನು ತಲೆ ಮೇಲೆ ಧರಿಸಿಕೊಂಡು, 'ಈ ಸಲ ಕಪ್ ನಮ್ದೇ' ಅಂತ ಘೋಷಣೆ ಕೂಗುತ್ತಿದ್ದಾರೆ. "ಕೋಟ್ಯಂತರ ಭಾರತೀಯರು ಟೀಂ ಇಂಡಿಯಾ ಗೆಲುವಿಗಾಗಿ ಕಾಯುತ್ತಿದ್ದೇವೆ. ಮೂರನೇ ಬಾರಿಗೆ ಚಾಂಪಿಯನ್ ಆಗಬೇಕು. ರೋಹಿತ್ ಶರ್ಮಾ ತಂಡ ಕಪ್ ಎತ್ತಿ ಹಿಡಿಯುವ ಕ್ಷಣಕ್ಕಾಗಿ ನಿರೀಕ್ಷಿಸುತ್ತಿದ್ದೇವೆ. ಇಡೀ ಪಂದ್ಯವನ್ನು ನಾನು ಈ ವಿಶ್ವಕಪ್ ಮಾದರಿಯ ಕಿರೀಟವನ್ನು ಧರಿಸಿಕೊಂಡು ನೋಡುತ್ತೇನೆ. ನಮಗೆ ಕಪ್ ಸಿಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಗುರು ಹೇಳಿದ್ದಾರೆ. ಜೊತೆಗೆ ಪುಟಾಣಿ ಪ್ರತ್ಯೇಕ್ಷ್ ಕೂಡ ಭಾರತ ತಂಡದ ಗೆಲುವಿಗೆ ಶುಭ ಹಾರೈಸಿದ್ದಾನೆ.
ಇದನ್ನೂ ಓದಿ: ಗೆದ್ದು ಬಾ ಭಾರತ: ದೇಶಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ-ವಿಡಿಯೋ