ಚಲಿಸುವ ವಂದೇ ಭಾರತ ರೈಲಿನಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಚರಣೆ - ಈಟಿವಿ ಭಾರತ್ ಕನ್ನಡ ಸುದ್ದಿ
🎬 Watch Now: Feature Video
ಬೆಂಗಳೂರು : ಚಲಿಸುವ ವಂದೇ ಭಾರತ ರೈಲಿನಲ್ಲಿ ಮಹಿಳಾ ದಿನಾಚರಣೆ ಆಚರಣೆ ಕಾರ್ಯಕ್ರಮ ನಡೆದಿದೆ. ಸ್ವರ್ಣ ಭಾರತ್ ಫೌಂಡೇಶನ್ ಸಂಸ್ಥೆಯ ವತಿಯಿಂದ 2023ನೇ ಸಾಲಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಬೆಂಗಳೂರಿನಿಂದ-ಮೈಸೂರಿಗೆ ಚಲಿಸುವ ಭಾರತ ರೈಲಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಇದನ್ನೂ ಓದಿ : ಬಿಎಂಟಿಸಿ ಇವಿ ಬಸ್ಗಳ ಫಾಸ್ಟ್ಟ್ಯಾಗ್ ಸಮಸ್ಯೆ: ಟೋಲ್ನಲ್ಲಿ ಬಸ್ಗಳ ಪರದಾಟ
ಸುಮಾರು 100 ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು: ಈ ಮೂಲಕ ಚಲಿಸುವ ರೈಲಿನಲ್ಲಿ ಮೊಟ್ಟ ಮೊದಲನೇ ಬಾರಿಗೆ ಮಹಿಳಾ ದಿನಾಚರಣೆ ಆಚರಿಸಲಾಗಿದೆ. ಭಾರತ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆಯನ್ನಾಗಿ ನಮೂದಿಸಲಾಗಿದೆ.
ಆಚರಣೆಯ ಸಂದರ್ಭದಲ್ಲಿ ಸಂಸ್ಥೆಯ ಡೈರೆಕ್ಟರ್ ಪದ್ಮಿನಿ ಭಾಗಿಯಾಗಿದ್ದರು: ಈ ರೆಕಾರ್ಡ್ನಲ್ಲಿ ಸುಮಾರು 100 ಮಹಿಳೆಯರು ಭಾಗವಹಿಸಿದ್ದರು ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ ರಜನಿ ಸಂತೋಷ್ ಹೇಳಿದ್ದಾರೆ. ಆಚರಣೆಯ ಸಂದರ್ಭದಲ್ಲಿ ಸಂಸ್ಥೆಯ ಡೈರೆಕ್ಟರ್ ಪದ್ಮಿನಿ ಕೌಶಲ್ಯ, ಪದಾಧಿಕಾರಿ ವಿಜಯ್ ಕುಮಾರ್ ಅವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಹೋಳಿ ಆಚರಣೆ; ಡಿಜೆ ಹಾಡಿಗೆ ಭರ್ಜರಿ ಸ್ಟೆಪ್ಸ್.. ಬಣ್ಣದಲ್ಲಿ ಮಿಂದೆದ್ದ ಯುವಕ, ಯುವತಿಯರು