ನಿಮ್ಮದೇ ಸರ್ಕಾರ ಇದ್ರೂ ಯಾಕೆ ಭೂಮಿ ಉಳಿಸಲಿಲ್ಲ: ಪ್ರಚಾರಕ್ಕೆ ಬಂದ ಕುಮಾರ್ ಬಂಗಾರಪ್ಪಗೆ ಗ್ರಾಮಸ್ಥರ ಪ್ರಶ್ನೆ - ಬಗರ್ ಹುಕುಂ ಸಾಗುವಳಿ
🎬 Watch Now: Feature Video
ಶಿವಮೊಗ್ಗ: ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಶಾಸಕ ಕುಮಾರ್ ಬಂಗಾರಪ್ಪನವರನ್ನು ಗ್ರಾಮಸ್ಥರು ಪ್ರಶ್ನಿಸಿದ ಪ್ರಸಂಗ ನಡೆಯಿತು. ಸೊರಬ ತಾಲೂಕಿನ ಪುಟ್ಟನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಗ್ರಾಮಸ್ಥರು ಬಗರ್ ಹುಕುಂ ಭೂಮಿಯನ್ನ ತೆರವು ಮಾಡಿದ ವಿಚಾರವಾಗಿ ಶಾಸಕರನ್ನು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಶಾಸಕರು, ಇದು ಕೋರ್ಟ್ನಲ್ಲಿ ಆದ ವಿಚಾರ ಎಂದು ಹೇಳುತ್ತಿದ್ದಂತಯೇ ಗ್ರಾಮಸ್ಥರು, ಸರ್ಕಾರ ನಿಮ್ಮದೇ ಇತ್ತು. ಯಾಕೆ ಭೂಮಿಯನ್ನು ಉಳಿಸಲಿಲ್ಲ. ಭೂಮಿ ತೆರವು ಮಾಡವುದನ್ನು ನೀವು ಉಳಿಸಬಹುದಾಗಿತ್ತು. ಆದರೆ, ಶಾಸಕರಾಗಿ ನೀವು ಏನೂ ಮಾಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಕಳೆದ ತಿಂಗಳು ಅರಣ್ಯ ಇಲಾಖೆಯವರು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮದಲ್ಲಿ ಫಸಲು ನೀಡುತ್ತಿದ್ದ ಅಡಕೆ ತೋಟವನ್ನು ತೆರವು ಮಾಡಿದ್ದರು. ಇದಕ್ಕೆ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿತ್ತು. ಶಾಸಕರು ಭೂಮಿ ಉಳಿಸಬಹುದಾಗಿತ್ತು. ಆದರೆ, ಕೋರ್ಟ್ ನೆಪ ಹೇಳಿಕೊಂಡು ಸುಮ್ಮನಾದರು ಎಂದು ಈ ಭಾಗದ ಜನರಿಗೆ ಶಾಸಕರ ವಿರುದ್ಧ ಅಸಮಾಧಾನವಿದೆ. ಶಾಸಕರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಕೂಡ ಪ್ರತಿಭಟನೆ ನಡೆಸಿದ್ದರು.
ಪ್ರಚಾರಕ್ಕೆ ಹೋದಾಗ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಪರಿಣಾಮ ಕುಮಾರ್ ಬಂಗಾರಪ್ಪ ತಮ್ಮ ಪ್ರಚಾರ ಸಭೆಯನ್ನು ಮೊಟಕುಗೊಳಿಸಿ ಅಲ್ಲಿಂದ ವಾಪಸ್ ಆದರು. ಸೊರಬ ಭಾಗದಲ್ಲಿ ಬಗರ್ ಹುಕುಂ ಸಾಗುವಳಿ ಕುರಿತು ಸಾಕಷ್ಟು ಚರ್ಚೆ, ಹೋರಾಟ ನಡೆದಿದೆ.
ಇದನ್ನೂ ಓದಿ: ಬಗರ್ ಹುಕುಂ ಭೂಮಿ ತೆರವು ವಿರೋಧಿಸಿ ಸೊರಬದಲ್ಲಿ ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ