110 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ರೈಲಿಂದ ಕೆಳಗೆ ಬಿದ್ದ ಯುವಕ : ಮುಂದೇನಾಯ್ತು ನೋಡಿ
🎬 Watch Now: Feature Video
ಶಹಜಹಾನ್ಪುರ (ಉತ್ತರಪ್ರದೇಶ): ಯುವಕನೊಬ್ಬ ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಕೆಳಬಿದ್ದಿರುವ ಘಟನೆ ಶಹಜಹಾನ್‌ಪುರದಲ್ಲಿ ನಡೆದಿದೆ. 110 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಪಾಟಲಿಪುತ್ರ ಎಕ್ಸ್ಪ್ರೆಸ್ನಿಂದ ಯುವಕ ಪ್ಲಾಟ್‌ಫಾರ್ಮ್ ಮೇಲೆ ಬಿದ್ದಿದ್ದು 100 ಮೀಟರ್ ವರೆಗೆ ಪ್ಲಾಟ್ ಫಾರಂ ಮೇಲೆ ಜಾರಿಕೊಂಡು ಹೋಗಿದ್ದಾನೆ. ಆದರೆ, ಯವಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪವಾಡ ಸದೃಶ್ಯದಂತೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನು ಕಂಡ ಜನ ಗಾಬರಿಗೊಂಡಿದ್ದಾರೆ. ಇದರ ಚಿತ್ರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ಇಂತಹದ್ದೇ ಘಟನೆ ಮುಂಬೈನಲ್ಲೂ ನಡೆದಿತ್ತು. ಮುಂಬೈನ ಬೋರಿವಲಿ ರೈಲು ನಿಲ್ದಾಣದಲ್ಲಿ ದಹಿಸರ್‌ನಿಂದ ವಿರಾರ್‌ಗೆ ಪ್ರಯಾಣಿಸಲು ರೈಲು ಹತ್ತಿದ್ದ ಮಹಿಳೆಯೊಬ್ಬರು ಟ್ರೈನ್ ಮುಂದೆ ಹೋಗುತ್ತಿದ್ದಂತೆ ಕಾಲು ಜಾರಿ ರೈಲು ಮತ್ತು ಪ್ಲಾಟ್ಫಾಮ್ ಮಧ್ಯ ಸಿಲುಕಿದ್ದರು. ಕೂಡಲೇ ಸ್ಥಳದಲ್ಲಿದ್ದ ಆರ್‌ಪಿಎಫ್ ಅಧಿಕಾರಿಯೊಬ್ಬರು ಮಹಿಳೆಯನ್ನ ಹೊರಕ್ಕೆ ಎಳೆದು ಪ್ರಾಣಾಪಾಯದಿಂದ ಪಾರು ಮಾಡಿದ್ದರು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಕೇಂದ್ರ ಮತ್ತು ಪಶ್ಚಿಮ ಮಾರ್ಗಗಳು ಸೇರಿದಂತೆ ರೈಲಿನಿಂದ ಬಿದ್ದು 700 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆಯ ಜೀವ ಉಳಿಸಿದ ಆರ್‌ಪಿಎಫ್ ಸಿಬ್ಬಂದಿ - ವಿಡಿಯೋ