ಸೈಕಲ್​ ಮೇಲೆ ತೆರಳುತ್ತಿದ್ದ 7 ವಿದ್ಯಾರ್ಥಿನಿಯರಿಗೆ ಗುದ್ದಿಕೊಂಡು ಹೋದ ಬೊಲೆರೋ - Video

By

Published : Jun 6, 2023, 5:45 PM IST

thumbnail

ಬೆಟ್ಟಿಯಾ (ಬಿಹಾರ): ಸೈಕಲ್​ಗಳ​ ಮೇಲೆ ತೆರಳುತ್ತಿದ್ದ ಏಳು ವಿದ್ಯಾರ್ಥಿನಿಯರಿಗೆ ಬೊಲೆರೋ ಕಾರೊಂದು ವೇಗದಲ್ಲಿ ಗುದ್ದಿದ ಘಟನೆ ಬಿಹಾರದ ಬೆಟ್ಟಿಯಾ ಪಟ್ಟಣದಲ್ಲಿ ನಡೆದಿದೆ. ಈ ಭೀಕರ ಘಟನೆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಎಲ್ಲ ಬಾಲಕಿಯರು ಪಾರಾಗಿದ್ದಾರೆ. 

ಹತ್ತನೇ ತರಗತಿ ಓದುತ್ತಿದ್ದ ಪೂಜಾ ಕುಮಾರಿ, ಮಮತಾ ಕುಮಾರಿ, ಸಂಧ್ಯಾ ಕುಮಾರಿ, ಛೋಟಿ ಕುಮಾರಿ, ಅಂಜಲಿ ಕುಮಾರಿ ಮತ್ತು ಲಾಸ್ತ್ನಾ ಕುಮಾರಿ ಸೇರಿ ಏಳು ವಿದ್ಯಾರ್ಥಿಗಳು ಕೋಚಿಂಗ್​ ಕ್ಲಾಸ್​ಗೆಂದು ಸಾಲಾಗಿ ಸೈಕಲ್​ಗಳ ಮೇಲೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಬೊಲೆರೋ ಹಿಂಬದಿಯಿಂದ ಒಂದು ನಂತರ ಒಂದಕ್ಕೆ ಎಂಬಂತೆ ಸೈಕಲ್​​ಗಳಿಗೆ ಡಿಕ್ಕಿ ಹೊಡೆದಿದೆ. ವೇಗದಲ್ಲಿ ಗುದ್ದಿದ ರಭಸಕ್ಕೆ ಎಲ್ಲ ವಿದ್ಯಾರ್ಥಿನಿಯರು ನೆಲಕ್ಕುಳಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನು ಕಂಡ ಸ್ಥಳೀಯರು ತಕ್ಷಣವೇ ವಿದ್ಯಾರ್ಥಿನಿಯರ ರಕ್ಷಣೆಗೆ ಧಾವಿಸಿದ್ದಾರೆ. ಅಲ್ಲದೇ, ಅಪಘಾತಕ್ಕೆ ಕಾರಣವಾದ ಬೊಲೆರೊ ಚಾಲಕನನ್ನು ಹಿಡಿದಿದ್ದಾರೆ. ನಂತರ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಚಾಲಕ ಹಾಗೂ ಬೊಲೆರೋ ಕಾರನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ತಂದೆ ಕೊಂದ ಮಗಳು, ತಾಯಿ: ವೆಬ್​ ಸಿರೀಸ್​ ನೋಡಿ ಶವ ವಿಲೇವಾರಿ ಮಾಡಿದವರು ಅಂದರ್​

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.