ಪ್ರಜ್ಞೆ ತಪ್ಪಿದ ಹಾವಿಗೆ ನೀರು ಕೊಟ್ಟು ಕಾಪಾಡಿದ ಸಾಮಾಜಿಕ ಕಾರ್ಯಕರ್ತ: ವಿಡಿಯೋ - ತಿರುಚೋಪುರಂ ಗ್ರಾಮ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/05-07-2023/640-480-18922150-thumbnail-16x9-sanju.jpg)
ಕಡಲೂರು : ಕಡಲೂರು ಜಿಲ್ಲೆಯ ತಿರುಚೋಪುರಂ ಗ್ರಾಮದ ನಟರಾಜನ್ ಎಂಬುವವರ ಮನೆಯ ಮುಂದೆ ಹಾವೊಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿತ್ತು. ಇದನ್ನು ಕಂಡ ಅವರು ಹಾವನ್ನು ರಕ್ಷಿಸುವಂತೆ ಸಾಮಾಜಿಕ ಕಾರ್ಯಕರ್ತ ಹಾಗೂ ಉರಗ ತಜ್ಞ ಶ್ರೀ ಸೆಲ್ವ ಅವರಿಗೆ ಮಾಹಿತಿ ನೀಡಿದರು. ಆಗ ಸ್ಥಳಕ್ಕೆ ಬಂದ ಅವರು ಹಾವು ರಕ್ಷಿಸಿ ಸುರಕ್ಷಿತವಾದ ಸ್ಥಳಕ್ಕೆ ಬಿಟ್ಟಿದ್ದಾರೆ.
ಅಲ್ಯೂಮಿನಿಯಂ ವ್ಯಾಪಾರ ಮಾಡುತ್ತಿರುವ ನಟರಾಜನ್ ಅವರು ನೀಡಿದ ಮಾಹಿತಿ ಮೇರೆಗೆ ಶ್ರೀ ಸೆಲ್ವ ಅವರು ಅಲ್ಲಿಗೆ ಭೇಟಿ ನೀಡಿ ಅಲ್ಲಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ ಹಾವನ್ನು ರಕ್ಷಿಸಬಹುದು ಎಂದು ನೀರು ಕೊಡಲು ಯತ್ನಿಸಿದರು. ಆಗ ಹಾವು ಅವರು ಕೊಟ್ಟ ನೀರನ್ನು ಕುಡಿಯತೊಡಗಿತು. ನೀರು ಕುಡಿದ ನಂತರ ಹಾವು ಚೇತರಿಸಿಕೊಂಡಿತು. ನಂತರ ಶ್ರೀ ಸೆಲ್ವ ಅದನ್ನು ಬಾಟಲಿಯಲ್ಲಿ ಹಾಕಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟರು.
'ಮನೆಗಳಲ್ಲಿ ಇಲಿಗಾಗಿ ಇಟ್ಟಿದ್ದ ವಿಷವನ್ನು ತಿಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಲಿಯನ್ನು ಹಾವು ನುಂಗಿರಬಹುದು. ವಿಷಪೂರಿತ ಇಲಿಯನ್ನು ತಿಂದರೆ ಪ್ರಜ್ಞೆ ತಪ್ಪುತ್ತದೆ' ಎಂದು ಉರಗ ತಜ್ಞ ಸೆಲ್ವ ಹೇಳಿದ್ದಾರೆ. ಈ ಘಟನೆಯನ್ನು ಅಲ್ಲಿನ ಸ್ಥಳೀಯರು ವೀಕ್ಷಿಸಿದ್ದಾರೆ.
ಇದನ್ನೂ ಓದಿ: ಹಾವು ಕಚ್ಚಿ ಮೃತಪಟ್ಟ ಮಗುವಿನ ಶವ ಹಿಡಿದುಕೊಂಡು 10 ಕಿ.ಮೀ ನಡೆದೇ ಸಾಗಿದ ತಾಯಿ!