ತಿರುಮಲದಲ್ಲಿ ಟ್ರಾಲಿಯಿಂದ ಜಾರಿ ಬಿದ್ದ ಕಾಣಿಕೆ ಹುಂಡಿ: ವಿಡಿಯೋ
🎬 Watch Now: Feature Video
ಆಂಧ್ರ ಪ್ರದೇಶ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮಹಾದ್ವಾರದಲ್ಲಿ ದೇವಸ್ಥಾನದ ಹುಂಡಿಯನ್ನು ಪರಕಾಮಣಿಗೆ ಸಾಗಿಸುವಾಗ ಆಕಸ್ಮಿಕವಾಗಿ ಟ್ರಾಲಿಯಿಂದ ಜಾರಿ ಕೆಳಗೆ ಬಿದ್ದ ಘಟನೆ ನಡೆಯಿತು. ಹುಂಡಿಯು ಭಕ್ತಾದಿಗಳು ದೇವರಿಗೆ ಸಲ್ಲಿಸಿದ್ದ ಅಮೂಲ್ಯವಾದ ಕಾಣಿಕೆಗಳಾದ ಚಿನ್ನದ ವಸ್ತುಗಳು, ಹಣದ ದೇಣಿಗೆಗಳನ್ನು ಒಳಗೊಂಡಿತ್ತು. ತಕ್ಷಣವೇ ಪರಕಾಮಣಿ ಸ್ವಯಂಸೇವಕರು ಮತ್ತು ಸಿಬ್ಬಂದಿ ಸ್ಪಂದಿಸಿ ಹಣವನ್ನು ಸುತ್ತಿ ಮತ್ತೆ ಪರಕಾಮಣಿಗೆ ತಂದೊಪ್ಪಿಸಿದರು. ಘಟನೆಯಿಂದಾಗಿ ಕೆಲಕಾಲ ಮಹಾದ್ವಾರದಲ್ಲಿ ದರ್ಶನಕ್ಕೆ ತೆರಳುತ್ತಿದ್ದ ಭಕ್ತರನ್ನು ಅಧಿಕಾರಿಗಳು ತಡೆದರು. ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಟ್ರಾಲಿ ತಳ್ಳುತ್ತಿದ್ದಾಗ ಕಟ್ಟೆಗೆ ಡಿಕ್ಕಿ ಹೊಡೆದಿದೆ. ಇದರಿಂದ ಟ್ರಾಲಿಯನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಘಟನೆ ನಡೆದಿದೆ ಎಂದು ಟಿಟಿಡಿ ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಟೋಕನ್ ಇಲ್ಲದ ಭಕ್ತರಿಗೆ ದೇವಾಲಯದ ಅಧಿಕಾರಿಗಳು 18 ಗಂಟೆಗಳ ಕಾಲ ಅನುಮತಿ ನೀಡಿದ್ದು, ಈ ಕ್ರಮದಲ್ಲಿ 21 ಕಂಪಾರ್ಟ್ಮೆಂಟ್ನಲ್ಲಿ ಭಕ್ತರು ತಿಮ್ಮಪ್ಪನ ದರ್ಶನಕ್ಕೆ ಕಾಯುತ್ತಿದ್ದಾರೆ. ನಿನ್ನೆ ದೇವರ ದರುಶನಕ್ಕೆ 77,299 ಭಕ್ತರು ಬಂದಿದ್ದರು. ಈ ಪೈಕಿ 30,479 ಭಕ್ತರು ತಾಲನಿಲ ಸಮರ್ಪಿಸಿದ್ದಾರೆ. ನಿನ್ನೆಯ ತಿರುಮಲ ಹುಂಡಿಯ ಒಟ್ಟು ಆದಾಯ 3.93 ಕೋಟಿ ರೂ. ಆಗಿದೆ.
ಇದನ್ನೂ ಓದಿ: ಭಕ್ತರಿಗೆ ಶಕ್ತಿ: 36 ದಿನಕ್ಕೆ ಮಾದಪ್ಪನ ಹುಂಡಿಯಲ್ಲಿ 2.47 ಕೋಟಿ ಸಂಗ್ರಹ