ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕಿಯರು ಮುಳುಗಿ ಸಾವು - ಬೀದರ್
🎬 Watch Now: Feature Video
Published : Aug 31, 2023, 2:30 PM IST
|Updated : Aug 31, 2023, 2:47 PM IST
ಬೀದರ್: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕಿಯರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಫುಲ್ದರ್ವಾಡಿ ಗ್ರಾಮದಲ್ಲಿ ನಡೆದಿದೆ. ಸಕ್ಕುಬಾಯಿ ಸುರೇಶ(16), ಚಾಂದನಿ ಬಾಬುರಾವ (16) ಮೃತರು. ಕೆರೆಯಿಂದ ಇಬ್ಬರ ಮೃತ ದೇಹಗಳನ್ನು ತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
10ನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕಿಯರು, ಗ್ರಾಮದ ಬಳಿಯ ಕೆರೆಯಲ್ಲಿ ಬಟ್ಟೆ ತೊಳೆದು ನಂತರ ಈಜಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದು ಸ್ಥಳೀಯರು ನೀರಿಗೆ ಧುಮುಕಿದರೂ ಈ ಇಬ್ಬರು ಬಾಲಕಿಯರನ್ನು ಉಳಿಸಲು ಸಾಧ್ಯವಾಗಿಲ್ಲ. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳದಲ್ಲಿ ಮೂವರು ಸಹೋದರಿಯರು ಕೆರೆಯಲ್ಲಿ ಮುಳುಗಿ ಸಾವು: ಕೇರಳ ರಾಜ್ಯದ ಪಾಲಕ್ಕಾಡ್ನಲ್ಲಿ ಮೂವರು ಸಹೋದರಿಯರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿತ್ತು. ಸ್ನಾನಕ್ಕೆಂದು ತೆರಳಿದ್ದ ಸಹೋದರಿಯರಲ್ಲಿ ತಂಗಿ ನೀರಿನಲ್ಲಿ ಮುಳುಗುತ್ತಿದ್ದಳು. ತಂಗಿಯನ್ನು ರಕ್ಷಣೆ ಮಾಡಲು ಯತ್ನಿಸಿ ಇಬ್ಬರು ಅಕ್ಕಂದಿರೂ ಸಹ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ನಶಿದಾ (26), ರಾಮ್ಶೀನಾ (23) ಮತ್ತು ರಿಂಶಿ (18) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ತುಮಕೂರು: ಕಣ್ಮರೆಯಾಗಿ ಮೂರು ದಿನದ ನಂತರ ಶವವಾಗಿ ಪತ್ತೆಯಾದ ವಿದ್ಯಾರ್ಥಿ