ಹೆಣ್ಣು ಮರಿಗೆ ತರಬೇತಿ ನೀಡುತ್ತಿರುವ ತಾಯಿ ಹುಲಿ: ವಿಡಿಯೋ - ರಣಥಂಬೋರ್ ಉದ್ಯಾನವನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18449262-thumbnail-16x9-vny.jpg)
ರಣಥಂಬೋರ್ (ರಾಜಸ್ಥಾನ): ಇಲ್ಲಿಯ ಹುಲಿ ಸಂರಕ್ಷಿತ ರಾಷ್ಟ್ರೀಯ ಉದ್ಯಾನವನದಲ್ಲಿ ನೂರಿ ಎಂಬ ಹುಲಿ ತನ್ನ ಹೆಣ್ಣು ಮರಿಯೊಂದಕ್ಕೆ ತರಬೇತಿ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ರಣಥಂಬೋರ್ ಉದ್ಯಾನವನಕ್ಕೆ ಭೇಟಿ ನೀಡಿದ ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಅಪರೂಪದ ದೃಶ್ಯ ಸೆರೆಹಿಡಿದಿದ್ದಾರೆ.
ನೂರಿ ಸುಮಾರು ಎರಡು ವರ್ಷಗಳ ಹಿಂದೆ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಇದೀಗ ತನ್ನ ಹೆಣ್ಣು ಮರಿಗೆ ತರಬೇತಿ ನೀಡುತ್ತಿದ್ದು, ಸುಮಾರು 15ರಿಂದ 20 ನಿಮಿಷಗಳ ಕಾಲ ಎರಡು ಹುಲಿಗಳು ಘರ್ಷಣೆ ನಡೆಸಿದವು. ಇನ್ನುಳಿದ ಎರಡು ಮರಿಗಳು ದೂರ ಕುಳಿತು ವೀಕ್ಷಿಸುತ್ತಿದ್ದವು. ಹುಲಿಯು ತನ್ನ ಮರಿಗೆ ತರಬೇತಿ ನೀಡುವುದನ್ನು ನೋಡಿದ ಸಂದರ್ಶಕರಿಗೆ ಇದು ಅಪರೂಪದ ದೃಶ್ಯವಾಗಿತ್ತು. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಹುಲಿ ನೂರಿ ಉದ್ಯಾನವನದಲ್ಲಿ ತನ್ನ ಮರಿಗಳೊಂದಿಗೆ ತಿರುಗಾಟ ನಡೆಸುವುದು ಆಗಾಗ ಕಂಡು ಬರುತ್ತದೆ. ಈ ರೀತಿ ಮರಿಗಳಿಗೆ ತರಬೇತಿ ನೀಡುತ್ತಿರುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ಜಂಗಲ್ ಸಫಾರಿ ವೇಳೆ ಪ್ರವಾಸಿಗರ ಮೇಲೆ ದಾಳಿಗೆ ಯತ್ನಿಸಿದ ಹುಲಿ; ಚಾಲಕನ ವಿರುದ್ದ ಪ್ರಕರಣ ದಾಖಲು