ದೊಡ್ಡಬಳ್ಳಾಪುರ: ಎರಡು ದೇವಸ್ಥಾನಗಳಲ್ಲಿ 5 ಮಾಂಗಲ್ಯ ಸರ, 18 ಚಿನ್ನ ಗುಂಡುಗಳು ಕಳವು
🎬 Watch Now: Feature Video
Published : Sep 24, 2023, 5:05 PM IST
ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಒಂದೇ ರಾತ್ರಿ ಎರಡು ದೇವಸ್ಥಾನಕ್ಕೆ ನುಗ್ಗಿದ ಕಳ್ಳರು 5 ಮಾಂಗಲ್ಯ ಸರ, 18 ಚಿನ್ನದ ಗುಂಡುಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹಾದ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹೆಜ್ಜಾಜಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಾರಮ್ಮ ಹಾಗೂ ಕೆಂಪಾಜಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿದೆ. ದೇವಸ್ಥಾನದ ಬಾಗಿಲು ಮೀಟಿ ಒಳನುಗ್ಗಿದ ಕಳ್ಳರು ಎರಡು ಹುಂಡಿ, 5 ಮಾಂಗಲ್ಯದ ಬೊಟ್ಟು, 18 ಚಿನ್ನದ ಗುಂಡುಗಳನ್ನು ಕಳವು ಮಾಡಿದ್ದಾರೆ. ಕೆಂಪಾಜಮ್ಮ ದೇವಸ್ಥಾನದಲ್ಲಿ ಮೂರು ಮಾಂಗಲ್ಯದ ಬೊಟ್ಟು ಹಾಗೂ ಒಂದು ಹುಂಡಿ ಕಳವು ಮಾಡಲಾಗಿದೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಲಗಿದ್ದ ಮಹಿಳೆಯ ಮಾಂಗಲ್ಯ ಸರ ಕಿತ್ತೊಯ್ದ ಕಳ್ಳರು: ಮತ್ತೊಂದೆಡೆ, ಒಂದೇ ರಾತ್ರಿ ಐದು ಕಡೆ ಸರಣಿ ಕಳ್ಳತನವಾಗಿದ್ದು, ಮನೆಯಲ್ಲಿ ಮಲಗಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಖದೀಮರು ಕದ್ದೊಯ್ದಿರುವ ಘಟನೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವಕುಮಾರ್ ಎಂಬುವವರ ಪತ್ನಿ ಭವಾನಿ ಮನೆಯಲ್ಲಿ ಮಲಗಿರುವಾಗ ಬಾಗಿಲನ್ನು ಮೀಟಿ ಒಳಗೆ ಪ್ರವೇಶಿಸಿದ ಕಳ್ಳರು, ಕತ್ತಿನಲ್ಲಿದ್ದ ಸುಮಾರು 1.50 ಲಕ್ಷ ರೂ. ಬೆಳೆಬಾಳುವ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿದ್ದಾರೆ. ಸೋಮಪ್ಪ ಎಂಬುವವರ ಮನೆಯಲ್ಲಿ ಎರಡು ಕಬ್ಬಿಣದ ಪೆಟ್ಟಿಗೆಯಲ್ಲಿದ್ದ 5 ಗ್ರಾಂ ಮಾಂಗಲ್ಯ ಮತ್ತು 40 ಸಾವಿರ ನಗದು ಹಣ ಕಳ್ಳತನವಾಗಿದೆ. ಈ ಸಂಬಂಧ ಹುಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಾಕು ತೋರಿಸಿ ಚಿನ್ನಾಭರಣ ಕಿತ್ತೊಯ್ದ ಖದೀಮರು: ಗಾಯಗೊಂಡ ವೃದ್ಧೆ ಆಸ್ಪತ್ರೆಗೆ ದಾಖಲು