ಮುಂಬೈಗೆ ಬಂದಿಳಿದ ಅಜೇಯ ಭಾರತ; ಮುಂದಿನ ಟಾರ್ಗೆಟ್ ಲಂಕಾ, ವಾಂಖೆಡೆಯಲ್ಲಿ ಪಂದ್ಯ-ವಿಡಿಯೋ
🎬 Watch Now: Feature Video
ಮುಂಬೈ (ಮಹಾರಾಷ್ಟ್ರ): ಟೀಮ್ ಇಂಡಿಯಾ ಕ್ರಿಕೆಟಿಗರು ಲಖನೌನಿಂದ ಇಂದು ಮುಂಬೈಗೆ ಬಂದು ತಲುಪಿದರು. ಮುಂಬೈ ವಿಮಾನ ನಿಲ್ದಾಣದಿಂದ ಆಟಗಾರರು ಬಸ್ ಮುಖಾಂತರ ಹೊಟೇಲ್ಗೆ ತೆರಳಿದರು. ಮಂಗಳವಾರದಿಂದ ನೆಟ್ ಅಭ್ಯಾಸ ಆರಂಭಿಸಲಿದ್ದಾರೆ.
ವಿರಾಟ್ ಕೊಹ್ಲಿ ಹೊರತುಪಡಿಸಿ ನಾಯಕ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ಇಶಾನ್ ಕಿಶನ್ ಅವರೊಂದಿಗೆ ತಂಡದ ಎಲ್ಲಾ ಸದಸ್ಯರು ಇದ್ದರು. ನವೆಂಬರ್ 2ರಂದು ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ತನ್ನ 7ನೇ ಪಂದ್ಯ ಆಡಲಿದೆ.
ಬಾಂಗ್ಲಾದೇಶದ ವಿರುದ್ಧ ಗಾಯಕ್ಕೆ ತುತ್ತಾದ ಹಾರ್ದಿಕ್ ಪಾಂಡ್ಯ ಲಂಕಾ ವಿರುದ್ಧ ಮೈದಾನಕ್ಕಿಳಿಯುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಬಿಸಿಸಿಐ, ಹಾರ್ದಿಕ್ ಅವರ ಆರೋಗ್ಯದ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ಭಾನುವಾರ ಲಖನೌನಲ್ಲಿ ಆಂಗ್ಲರ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ 100 ರನ್‌ಗಳ ಜಯ ದಾಖಲಿಸಿತು. ಸತತ 6 ಪಂದ್ಯಗಳನ್ನು ಗೆದ್ದಿರುವ ತಂಡ 12 ಅಂಕಗಳಿಂದ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಇದರಿಂದ ಸೆಮಿಫೈನಲ್ ಪ್ರವೇಶ ಹೆಚ್ಚೂ ಕಡಿಮೆ ಪಕ್ಕಾ ಆಗಿದೆ.
ಟೀಮ್ ಇಂಡಿಯಾಕ್ಕೆ ಒಂಬತ್ತರಲ್ಲಿ ಇನ್ನೂ ಮೂರು ಪಂದ್ಯಗಳು ಬಾಕಿ ಇವೆ. ನವೆಂಬರ್ 2ಕ್ಕೆ ಸಿಂಹಳೀಯರ ವಿರುದ್ಧ ಆಡಿದರೆ, ನ.5ಕ್ಕೆ ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ. 12ಕ್ಕೆ ನೆದರ್ಲೆಂಡ್ಸ್ ವಿರುದ್ಧ ಭಾರತ ತನ್ನ ಕೊನೆಯ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಲಿದೆ.
ಇದನ್ನೂ ಓದಿ: ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ 40 ವಿಕೆಟ್ ಸಾಧನೆ: ಅಲನ್ ಡೊನಾಲ್ಡ್ ದಾಖಲೆ ಮುರಿದ ಮೊಹಮ್ಮದ್ ಶಮಿ