ಗಾಲ್ಫ್ ಕ್ಲಬ್ಗೆ ನುಗ್ಗಿದ ಕಾಳಿಂಗ.. 13 ಅಡಿ ಉದ್ದದ ಸರ್ಪ ರಕ್ಷಿಸಿದ ಸ್ನೇಕ್ ಕಿರಣ್ - Snake Kiran rescued a king cobra that rushed to the golf club
🎬 Watch Now: Feature Video
ಶಿವಮೊಗ್ಗ: ಜಿಲ್ಲೆಯ ಹೊರ ವಲಯದ ಕಿಮ್ಮನೆ ಗಾಲ್ಫ್ ಕ್ಲಬ್ ನ ಆವರಣದಲ್ಲಿ ಸುಮಾರು 13 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಗಾಲ್ಫ್ ಸಿಬ್ಬಂದಿಯನ್ನು ಕಂಡ ಕಾಳಿಂಗ ಸರ್ಪವು ಇಲ್ಲಿನ ಪಂಪ್ ಹೌಸ್ ನಲ್ಲಿ ಅಡಗಿ ಕುಳಿತುಕೊಂಡಿತ್ತು. ಸಿಬ್ಬಂದಿ ತಕ್ಷಣ ಸ್ನೇಕ್ ಕಿರಣ್ ಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಸ್ನೇಕ್ ಕಿರಣ್ ಕಾಳಿಂಗ ಸರ್ಪವನ್ನು ರಕ್ಷಿಸಿ ಸುರಕ್ಷಿತವಾಗಿ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಬಿಟ್ಟು ಬಂದಿದ್ದಾರೆ.
Last Updated : Feb 3, 2023, 8:24 PM IST