ಜಾನಪದ ಕಲಾವಿದರೊಂದಿಗೆ ಹೆಜ್ಜೆ ಹಾಕಿದ ಸಿಂಗಾಪುರದ ಹೈಕಮಿಷನರ್-ವಿಡಿಯೋ - G20
🎬 Watch Now: Feature Video
ಡಾರ್ಜಿಲಿಂಗ್ (ಪಶ್ಚಿಮ ಬಂಗಾಳ) : ಡಿಸೆಂಬರ್ 1, 2022 ರಂದು ಜಿ-20 ಅಧ್ಯಕ್ಷತೆ ವಹಿಸಿಕೊಂಡ ಭಾರತ ನವೆಂಬರ್ 30, 2023 ರವರೆಗೆ ಮಹತ್ವದ ಸ್ಥಾನವನ್ನು ನಿಭಾಯಿಸಲಿದೆ. ಭಾರತದಲ್ಲಿರುವ 50 ಪ್ರಮುಖ ನಗರಗಳಲ್ಲಿ ವರ್ಕಿಂಗ್ ಗ್ರೂಪ್ ಸಭೆಗಳು ನಡೆಯುತ್ತಿವೆ. ಅದರಂತೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಶನಿವಾರ ನಡೆದ ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಕುತೂಹಲದ ವಿಶೇಷ ಘಟನೆ ನಡೆಯಿತು.
ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಸಿಂಗಾಪುರದ ಹೈಕಮಿಷನರ್ ಸೈಮನ್ ವಾಂಗ್ ಅವರು ಇಲ್ಲಿನ ಜಾನಪದ ಕಲಾವಿದರೊಂದಿಗೆ ನೃತ್ಯ ಮಾಡಿ ಗಮನ ಸೆಳೆದರು. ಇದರ ವಿಡಿಯೋವನ್ನು ಸ್ವತಃ ಸೈಮನ್ ವಾಂಗ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋಗೆ ಜಿ20 ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಇದೊಂದು ಅದ್ಭುತ ಸಂಜೆ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.
ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಮೆಚ್ಚುಗೆಯ ಪ್ರತಿಕ್ರಿಯೆ ಪಡೆಯುತ್ತಿದೆ. ಹೈ ಕಮಿಷನರ್ ಸೈಮನ್ ವಾಂಗ್ ಜಾನಪದ ಕಲಾವಿದರೊಂದಿಗೆ ಅವರಂತೆ ಹಾಡಿನ ತಾಳಕ್ಕೆ ಕುಣಿದಿದ್ದಾರೆ. ವಿಡಿಯೋ 30 ಸಾವಿರಕ್ಕಿಂತ ಹೆಚ್ಚು ವೀಕ್ಷಣೆ ಪಡೆದಿದೆ.
ಇದನ್ನೂ ಓದಿ: ಜಿ20 ಪ್ರತಿನಿಧಿಗಳಿಂದ ಯೋಗಾಭ್ಯಾಸ- ವಿಡಿಯೋ