ಸಿದ್ದರಾಮಯ್ಯರಂತ ನಾಯಕರಿಗೆ ಕ್ಷೇತ್ರವೇ ಸಿಗುತ್ತಿಲ್ಲ, ಅವರಿಗೆ ಈ ಪರಿಸ್ಥಿತಿ ಬರಬಾರದಿತ್ತು: ಶಾಸಕ ಕುಮಾರ್ ಬಂಗಾರಪ್ಪ - ETV Bharat kannada News
🎬 Watch Now: Feature Video
ದಾವಣಗೆರೆ : ಮಾಜಿ ಸಿಎಂ ಸಿದ್ದರಾಮಯ್ಯನವರು ರಾಜಕೀಯ ಕ್ಷೇತ್ರದಲ್ಲಿ ಎಂತ ದೊಡ್ಡ ನಾಯಕ. ಆದರೇ ಅವರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಕ್ಷೇತ್ರವೇ ಸಿಗುತ್ತಿಲ್ಲ, ಇಂತವರಿಗೆ ಈ ಪರಿಸ್ಥಿತಿ ಬರಬಾರದಿತ್ತು. ಇದರಿಂದ ಕಾಂಗ್ರೆಸ್ಸಿನ ಒಳ ಜಗಳ ಏನು ಎಂಬುದು ರಾಜ್ಯಕ್ಕೆ ಗೊತ್ತಾಗುತ್ತದೆ ಎಂದು ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ ಹೇಳಿದರು. ದಾವಣಗೆರೆಯಲ್ಲಿ ನಡೆಯಲಿರುವ ಮಹಾ ಸಂಗಮ ಮೋದಿ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಹಾಜರಾಗುವ ಮುನ್ನ ಮಾತನಾಡಿದ ಅವರು, ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯನವರಿಗೆ ಇದು ವೈಯಕ್ತಿಕವಾಗಿ ಧಕ್ಕೆ ತರುತ್ತಿದ್ದು, ರಾಜ್ಯಕ್ಕೂ ಧಕ್ಕೆ ತಂದಿದೆ. ಕೋಲಾರ, ಬಾದಾಮಿ, ಚಾಮುಂಡೇಶ್ವರಿ, ವರುಣಾ ಹೀಗೆ ಹಲವಾರು ಕ್ಷೇತ್ರಗಳ ಹೆಸರು ಕೇಳಿ ಬರುತ್ತಿರುವುದು ವಿಚಿತ್ರ. ಒಬ್ಬ ದೊಡ್ಡ ನಾಯಕನಿಗೆ ಈ ಸ್ಥಿತಿ ಎದುರಾಗಬಾರದಿತ್ತು ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕೊರತೆ ಎದ್ದು ಕಾಣಿಸುತ್ತಿದ್ದು, ಅವರ ನಾಯಕರಿಗೆ ಜಾಗ ಇಲ್ಲ ಎನ್ನುವುದು ದುರಂತವಾಗಿದೆ. ತಮ್ಮ ಪಕ್ಷದಲ್ಲೇ ಎಲ್ಲಾ ಸರಿ ಇಲ್ಲದ ಮೇಲೆ ಇವರು ರಾಜ್ಯಕ್ಕೆ ಏನನ್ನು ಒಳ್ಳೆದನ್ನು ಮಾಡುತ್ತಾರೆ. ಸಿದ್ದರಾಮಯ್ಯನವರಿಗೆ ನಾನು ಎಲ್ಲಿ ಗೆಲ್ಲುತ್ತೇನೋ, ಇಲ್ಲ ಹಿನ್ನಡೆಯಾಗುತ್ತೋ, ಇಲ್ಲ ಸ್ವಪಕ್ಷದವರೇ ನಮ್ಮನ್ನ ಎಲ್ಲಿ ಸೋಲಿಸುತ್ತಾರೋ ಎಂಬ ಗೊಂದಲದಲ್ಲಿದ್ದಾರೆ ಎಂದು ಕುಮಾರ್ ಬಂಗಾರಪ್ಪ ತಿಳಿಸಿದರು.
ಅಶ್ವಮೇಧ ಯಾಗದಂತೆ ಪ್ರಧಾನಿ ನರೇಂದ್ರ ಮೋದಿ ಅವರು ದಾವಣಗೆರೆಯಲ್ಲಿ ಮಹಾ ಸಂಗಮ ನಡೆಸುತ್ತಿದ್ದಾರೆ. ಮೇಲಾಗಿ ದಾವಣಗೆರೆ ರಾಜ್ಯದ ಹೃದಯ ಭಾಗ ಜೊತೆಗೆ ದಾವಣಗೆರೆ ಅದೃಷ್ಠದ ನೆಲ ಕೂಡ ಹೌದು. ಇಂತಹ ಪರಿಸ್ಥಿತಿಯಲ್ಲಿ ಎಂಟು ಜಿಲ್ಲೆಗಳ ಪ್ರಮುಖರನ್ನು ಕರೆಯಿಸಿ ಪೂರ್ವಸಿದ್ಧತಾ ಸಭೆ ನಡೆಸಲಾಗುತ್ತಿದೆ ಎಂದು ಕುಮಾರ್ ಬಂಗಾರಪ್ಪ ತಿಳಿಸಿದರು.
ಇದನ್ನೂ ಓದಿ :ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ನಡುವೆ ಬಣ ಸೃಷ್ಟಿ; ಚನ್ನಗಿರಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಮೊಟಕು