ಮುಂಗಾರಿ ಮಳೆ ಒಂಭತ್ತಾಣೆ, ಹಿಂಗಾರಿ ಮಳೆ ಹತ್ತಾಣೆ.. ಕಾಲಜ್ಞಾನ ನುಡಿದ ಬಬಲಾದಿ ಸ್ವಾಮೀಜಿ - ಸಿದ್ದರಾಮ ಸ್ವಾಮೀಜಿ ಅವರು ಕಾಲಜ್ಞಾನ
🎬 Watch Now: Feature Video
ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕು ಬಬಲಾದಿ ಜಾತ್ರೆಯಲ್ಲಿ ಸಿದ್ದರಾಮ ಸ್ವಾಮೀಜಿ ಅವರು ಕಾಲಜ್ಞಾನವನ್ನು ಈ ಬಾರಿಯೂ ನುಡಿದಿದ್ದಾರೆ. ಬಹು ವರ್ಷಗಳ ಹಿಂದೆ ಚಿಕ್ಕಯ್ಯಪ್ಪ ಬರೆದಿಟ್ಟಿರುವ ಕಾಲಜ್ಞಾನವನ್ನು ಈ ಬಾರಿಯ 2023 ರ ಬಬಲಾದಿ ಸದಾಶಿವ ಕಾಲಜ್ಞಾನವನ್ನು ಭಕ್ತರ ಸಮ್ಮುಖದಲ್ಲಿ ನುಡಿದರು. ಆಷಾಢ ಮಾಸದಲ್ಲಿ ಮಳೆ ಶುಭೀಕ್ಷ, ಶ್ರಾವಣದಲ್ಲಿ ಗಾಳಿ ಬಹಳ ಇರುತ್ತೆ, ಅಕ್ಕಿ ಗೋಧಿ ಹಡಿಗೆ ಬೆಳಿತಾವ ಖಾದ್ಯ ಪದಾರ್ಥಗಳು ತುಟ್ಟಿ ಆಗ್ತಾವ, ಶುಭಕೃತ ನಾಮ ಸಂವತ್ಸರದಲ್ಲಿ ಸಜ್ಜನರು ಕೂಡಾ ದುರ್ಜನರಾಗ್ತಾರ. ಮುಂಗಾರು ಮಳೆ ಉತ್ತಮವಾಗಿರುತ್ತೆ, ಹಿಂಗಾರಿ ಮಳೆಯೂ ಉತ್ತಮ ಫಲವನ್ನು ಕೊಡ್ತದೆ.
ಜಲಪ್ರಳಯದ ಸೂಚನೆ ತಿಳಿಯಿರಣ್ಣಾ, ವೈಶಾಖ ಜ್ಯೇಷ್ಠ ಮಾಸದಲ್ಲಿ ಸುಖ ನೆಮ್ಮದಿ ಸಿಗತೈತಿ, ಇನ್ನಷ್ಟು ಭಾಗ ತ್ರಾಸ ಐತಿ, ಸುಖನೂ ಇದೆ.. ದುಃಖನೂ ಇದೆ, ರಾಜ್ಯ ರಾಜಕಾರಣದಲ್ಲಿ ಸ್ವಲ್ಪ ಹೊಸ ತಿರುವು ಉಂಟಾಗುತ್ತ. ಆಳುವಂತಹ ಪ್ರಭುಗಳಿಗೆ ಸುಭೀಕ್ಷೆ ಐತಿ, ತನ್ನಿಂದ ತಾನೇ ಹಸನಾಗತೈತಿ ಎಂದು ಭವಿಷ್ಯ ನುಡಿದರು.
ಗಡಿ ಕಾಯುವಂತಹ ಯೋಧರಿಗೆ ಜಯ ಉಂಟಾಗುತ್ತದೆ. ಆದ್ರೂ ಸೂತಕದ ಛಾಯೆ ಇನ್ನೊಂದು ಐತಿ, ಮುಂಗಾರಿ ಮಳೆ ಒಂಭತ್ತಾಣೆ, ಹಿಂಗಾರಿ ಮಳೆ ಹತ್ತಾಣೆ ಜಗತ್ತಿಗೆ ಸುಭೀಕ್ಷ ಐತಿ ಎಂದು ಸ್ವಾಮೀಜಿ ಕಾಲಜ್ಞಾನದ ಬಗ್ಗೆ ತಿಳಿಸಿದರು.