ಶ್ರೀ ಸಿದ್ಧೇಶ್ವರ ರಥೋತ್ಸವಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚಣೆ: ವಿಡಿಯೋ - ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ರಥೋತ್ಸವ
🎬 Watch Now: Feature Video
ಹುಬ್ಬಳ್ಳಿ: ಇಲ್ಲಿನ ಐತಿಹಾಸಿಕ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ರಥಕ್ಕೆ ಹೆಲಿಕಾಪ್ಟರ್ನಿಂದ ಪುಷ್ಪಾರ್ಚನೆ ಮಾಡುವ ಮೂಲಕ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ನಡೆಯಿತು. ಸುಮಾರು 5 ಸಾವಿರ ಅಡಿ ಎತ್ತರದಿಂದ ಪುಷ್ಪಾರ್ಚಣೆ ಮಾಡಿದ್ದು ಜನಮನ ಸೆಳೆಯಿತು.
ಮೊದಲು ಹೂಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮುಖಾಂತರ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಮೆರವಣಿಗೆಯುದ್ದಕ್ಕೂ ವೀರಗಾಸೆ ನೃತ್ಯ, ಕಹಳೆ, ಮಂಗಳವಾದ್ಯಗಳು ಮೊಳಗಿದವು. ರಥ ಹಾಗೂ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಬಂದಿದ್ದ ಭಕ್ತರು ಬಾಳೆಹಣ್ಣು, ಉತ್ತತ್ತಿ ರಥಕ್ಕೆಸೆದು ಭಕ್ತಿಭಾವ ಮೆರೆದರು. ರಥ ಎಳೆಯುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು.
ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ಮೂಲಿಮಠ, ಸೌದತ್ತಿ ಹಾಗೂ ಶ್ರೀ ಸಿದ್ದಯ್ಯನವರು ಹಿರೇಮಠ, ಶ್ರೀ ಸಿದ್ದೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜಣ್ಣ ಕೊರವಿ, ಅಡಿವೆಪ್ಪ ಮೆಣಸಿನಕಾಯಿ, ಹಾಗೂ ಗ್ರಾಮದ ಗುರುಹಿರಿಯರ ಸಮಕ್ಷಮದಲ್ಲಿ ಜಂಗಮ ವಟುಗಳಿಗೆ ಐಯಾಚಾರ ಹಾಗೂ ಲಿಂಗ ದೀಕ್ಷೆ ಕಾರ್ಯಕ್ರಮವನ್ನು ಶ್ರೀ ಸಿದ್ದೇಶ್ವರ ಕೈಲಾಸ ಮಂಟಪದಲ್ಲಿ ನೆರವೇರಿಸಲಾಯಿತು.
ಇದನ್ನೂ ಓದಿ: ಮಾದಪ್ಪನ ಬೆಟ್ಟದಲ್ಲಿ ಅದ್ಧೂರಿ ಯುಗಾದಿ ರಥೋತ್ಸವ: ನೋಡಿ ವೈಮಾನಿಕ ದೃಶ್ಯ!