India Couture Week: ಡಿಸೈನರ್​ ರಾಹುಲ್ ಮಿಶ್ರಾಗಾಗಿ ಶ್ರದ್ಧಾ ರ‍್ಯಾಂಪ್ ವಾಕ್...'ನಾನು ಧರಿಸಿರುವ ಉಡುಪು ವಿಶೇಷ'-ವಿಡಿಯೋ

By

Published : Aug 3, 2023, 7:14 AM IST

thumbnail

ನವದೆಹಲಿ: ನವದೆಹಲಿಯಲ್ಲಿ ಜುಲೈ 25 ಕ್ಕೆ ಪ್ರಾರಂಭವಾದ ಫ್ಯಾಷನ್​ ಈವೆಂಟ್​ ಇಂಡಿಯಾ ಕೌಚರ್ ವೀಕ್ 2023 ಆಗಸ್ಟ್​ 2ಕ್ಕೆ ಮುಕ್ತಾಯವಾಯಿತು. ಈ ಮೆಗಾ ಈವೆಂಟ್​ನ್ನು ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಹ್ಯುಂಡೈ ಮೋಟಾರ್ ಇಂಡಿಯಾ ಜಂಟಿಯಾಗಿ ಆಯೋಜಿಸಿದ್ದವು. ಈ ಕಾರ್ಯಕ್ರಮದಲ್ಲಿ ಡಿಸೈನರ್​ ರಾಹುಲ್ ಮಿಶ್ರಾ ಅವರಿಗಾಗಿ ರ‍್ಯಾಂಪ್ ವಾಕ್ ಮಾಡಿದ ಶ್ರದ್ಧಾ ಕಪೂರ್​ ತಾವು ಧರಿಸಿದ್ದ ಉಡುಗೆ ಮತ್ತು ವಿನ್ಯಾಸದ ಬಗ್ಗೆ ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿದರು.

'ನಾನು ಧರಿಸಿರುವ ಉಡುಪು ಹೆಚ್ಚು ವಿಶೇಷವಾಗಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಇದು ಕಲೆಗಾರನ ಕಲೆಗೆ ಸಾಕ್ಷಿಯಾಗಿದೆ. ಈ ಬಟ್ಟೆಯನ್ನು ಸುಂದರಾವಗಿ ವಿನ್ಯಾಸಗೊಳಿಸಲು, ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ನಾನು ಅತ್ಯಂತ ಸುಂದರವಾಗಿ ಕಾಣುತ್ತಿದ್ದೇನೆ. ಈ ಉಡುಪನ್ನು ಧರಿಸುವ ಮೂಲಕ, ತಯಾರಕ ಪ್ರತಿನಿಧಿಯಾಗಿ ಇಲ್ಲಿ ನಾನು ಕಂಗೊಳಿಸಿದೆ. ನನಗೆ ಇದು ತುಂಬಾ ಹೆಮ್ಮೆಯ ಕ್ಷಣವಾಗಿದೆ' ಎಂದು ನಟಿ ಸಂತಸ ವ್ಯಕ್ತಪಡಿಸಿದರು. 

ಇನ್ನು ನಿಮಗೆಲ್ಲ ತಿಳಿದಿರುವಂತೆ ಭಾರತೀಯ ಫ್ಯಾಷನ್​ ಡಿಸೈನರ್​ ರಾಹುಲ್​ ಮಿಶ್ರಾ ಪ್ಯಾರಿಸ್‌ನಲ್ಲಿ ನಡೆದ ಹಾಟ್ ಕೌಚರ್ ವೀಕ್‌ನಲ್ಲಿ ಪ್ರದರ್ಶನಕ್ಕೆ ಆಹ್ವಾನಿಸಲ್ಪಟ್ಟ ಮೊದಲ ಭಾರತೀಯ ವಿನ್ಯಾಸಕ. ಅವರು 2014 ರಲ್ಲಿ ಮಿಲನ್ ಫ್ಯಾಶನ್ ವೀಕ್‌ನಲ್ಲಿ ಅಂತರರಾಷ್ಟ್ರೀಯ ವೂಲ್‌ಮಾರ್ಕ್ ಪ್ರಶಸ್ತಿಯನ್ನು ಗೆದ್ದರು, ಈ ಮೂಲಕ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ವಿನ್ಯಾಸಕರಾಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: India Couture Week 2023: ಫ್ಯಾಷನ್​ ಈವೆಂಟ್​ನಲ್ಲಿ ಮಿಂಚಿದ ದಿಶಾ ಪಟಾನಿ, ಸಾರಾ ಅಲಿ ಖಾನ್​, ಆದಿತ್ಯ ರಾಯ್​ ಕಪೂರ್

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.