ಚಿಕ್ಕೋಡಿ: ಖಾಸಗಿ ಶಾಲಾ ಬಸ್ ಪಲ್ಟಿ, ಅಪಾಯದಿಂದ ಪಾರಾದ ವಿದ್ಯಾರ್ಥಿಗಳು - ಚಿಕ್ಕೋಡಿಯಲ್ಲಿ ಬಸ್ ಅಪಘಾತ
🎬 Watch Now: Feature Video
Published : Dec 18, 2023, 1:34 PM IST
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಖಾಸಗಿ ಶಾಲೆಗೆ ಸೇರಿದ ಬಸ್ ಒಂದು ಪಲ್ಟಿಯಾಗಿದ್ದು, ವಿದ್ಯಾರ್ಥಿಗಳು ಸೇರಿದಂತೆ ಚಾಲಕ ಅಪಾಯದಿಂದ ಪಾರಾಗಿರುವ ಘಟನೆ ಸಂಭವಿಸಿದೆ. ಸೋಮವಾರ ಬೆಳಗಿನ ಜಾವ ಘಟನೆ ನಡೆದಿದ್ದು, ದಾರಿ ಕಿರಿದಾಗಿದ್ದು, ಮುಂದಿನಿಂದ ಬರುತ್ತಿದ್ದ ಕಬ್ಬಿನ ಲಾರಿಗೆ ಸೈಡ್ ಕೊಡುವ ವೇಳೆ ಶಾಲಾ ಬಸ್ ರಸ್ತೆಯಿಂದ ಗುಂಡಿಗೆ ಪಲ್ಟಿಯಾಗಿದೆ. ಚಾಲಕ ಹಾಗೂ ನಿರ್ವಾಹಕ ಸೇರಿದಂತೆ 10 ವಿದ್ಯಾರ್ಥಿಗಳು ಬಸ್ನಲ್ಲಿದ್ದರು. ಅದೃಷ್ಟವಶಾತ್ ಬಸ್ನಲ್ಲಿದ್ದ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ.
ನಿಯಂತ್ರಣ ತಪ್ಪಿ ಶಾಲಾ ಬಸ್ ಪಲ್ಟಿ: ನಿಯಂತ್ರಣ ತಪ್ಪಿ ಶಾಲಾ ವಾಹನವೊಂದು ಕಾಲುವೆಗೆ ನುಗ್ಗಿ ಪಲ್ಟಿಯಾಗಿದ್ದ ಘಟನೆ ಆಂಧ್ರಪ್ರದೇಶದ ಕೋಡೂರು ತಾಲೂಕಿನ ವಿಶ್ವನಾಥಪಲ್ಲಿ ಬಳಿ ನವೆಂಬರ್ನಲ್ಲಿ ನಡೆದಿತ್ತು. ಕೃಷ್ಣಾ ಜಿಲ್ಲೆಯ ಅವನಿಗಡ್ಡಾದ ಖಾಸಗಿ ಶಾಲೆಯೊಂದಕ್ಕೆ ಸೇರಿದ ಬಸ್ ಅದಾಗಿತ್ತು. ಬಸ್ನ ಸ್ಟೇರಿಂಗ್ ರಾಡ್ ತುಂಡಾಗಿ ಈ ಅವಘಡ ಸಂಭವಿಸಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಗಾಯಗಳಾಗಿರಲಿಲ್ಲ.
ಇದನ್ನೂ ಓದಿ: ಶಾಲಾ ಬಸ್ ಚಾಲಕನಿಗೆ ಹಠಾತ್ ಹೃದಯಾಘಾತ: ಸ್ಟೇರಿಂಗ್ ಕಂಟ್ರೋಲ್ ಮಾಡಿ ದುರಂತ ತಪ್ಪಿಸಿದ ವಿದ್ಯಾರ್ಥಿನಿ