ಅಯೋಧ್ಯಾ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ - ವಿಡಿಯೋ
🎬 Watch Now: Feature Video
ಅಯೋಧ್ಯಾ(ಉತ್ತರಪ್ರದೇಶ): ಅಯೋಧ್ಯೆಯಲ್ಲಿ ಹರಿಯುವ ಪವಿತ್ರ ಸರಯೂ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಉಗ್ರ ಸ್ವರೂಪ ಪಡೆದುಕೊಂಡಿರುವ ಸರಯೂ ಅಪಾಯದ ಮಟ್ಟಕ್ಕಿಂತ ಸುಮಾರು 44 ಸೆಂ.ಮೀ ಎತ್ತರದಲ್ಲಿ ಹರಿಯುತ್ತಿದೆ. ಕೇಂದ್ರ ಜಲ ಆಯೋಗದ ಪ್ರಕಾರ, ಅಪಾಯದ ಗುರುತು 92.730 ಮೀಟರ್. ಆದರೆ, ನದಿಯಲ್ಲೀಗ ಆ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಇಲ್ಲಿನ ಹಲವು ಸ್ಮಶಾನಗಳಿಗೆ ಹಾನಿಯಾಗಿದೆ. ನದಿ ಭಾಗದ ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಸರಯೂ ನದಿ ದಡದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಸ್ಮಶಾನ ಮುಳುಗಡೆಯಾಗಿದ್ದು, ಶವ ಸಂಸ್ಕಾರಕ್ಕೂ ಸಮಸ್ಯೆ ಉಂಟಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಘಾಟ್ನ ಮೆಟ್ಟಿಲುಗಳ ಮೇಲೆ ತಮ್ಮ ಸಂಬಂಧಿಕರ ಅಂತಿಮ ಸಂಸ್ಕಾರವನ್ನು ಮಾಡುತ್ತಿದ್ದಾರೆ.
ತಲೆದೋರಿರುವ ಈ ಸಮಸ್ಯೆಯಿಂದ ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಷನ್ ನಿರ್ಮಾಣ ಹಂತದಲ್ಲಿರುವ ಸ್ಮಶಾನವನ್ನು ತೆರೆಯಲಾಗಿದೆ. ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಶನ್‌ನ ಮುನ್ಸಿಪಲ್ ಕಮಿಷನರ್ ವಿಶಾಲ್ ಸಿಂಗ್, ಮೃತದೇಹವನ್ನು ಸುಡುವ ಸ್ಥಳಗಳಿಗೆ ನೀರು ಬಂದು ನಿಂತಿದೆ. ಇದರಿಂದ ಆ ಸ್ಥಳಗಳು ಮುಳುಗುವ ಹಂತದಲ್ಲಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಯಾಗಿ ಹಳೆಯ ಬೈಕುಂಠ ಧಾಮದ ಬಳಿ ನಿರ್ಮಿಸಲಾಗುತ್ತಿರುವ ಹೊಸ ಸ್ಮಶಾನವನ್ನು ತೆರೆದಾಗಿದೆ. ನೂತನ ಸ್ಮಶಾನದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಮಳೆಗಾಗಿ ಅವಿವಾಹಿತ ಯುವಕರಿಂದ ವಿಚಿತ್ರ ಆಚರಣೆ!