ಚಂದ್ರಶೇಖರ್ ಗುರೂಜಿ ಕೊಲೆ ಕೇಸ್: ಮೊಬೈಲ್ ಲೋಕೇಷನ್ನಿಂದ ಸಿಕ್ಕಿಬಿದ್ದ ಹಂತಕರು - ಗುರೂಜಿ ಹಂತಕರು ರಾಮದುರ್ಗದಲ್ಲಿ ಬಂಧನ
🎬 Watch Now: Feature Video
ಬೆಳಗಾವಿ: ಖ್ಯಾತ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಕಲಘಟಗಿ ತಾಲೂಕಿನ ಮಂಜುನಾಥ್ ಮತ್ತು ಮಹಾಂತೇಶ ರಾಮದುರ್ಗದಲ್ಲಿ ಸಿಕ್ಕಿಬಿದ್ದಿದ್ದಾರೆ. ಕೊಲೆ ಪ್ರಕರಣ ಸುದ್ದಿ ಗೊತ್ತಾದ ತಕ್ಷಣವೇ ಹುಬ್ಬಳ್ಳಿ ಪೊಲೀಸರು ಆರೋಪಿಗಳ ಬೆನ್ನುಹತ್ತಿದ್ದರು. ಆರೋಪಿಗಳ ಮೊಬೈಲ್ ಲೋಕೇಷನ್ ಟ್ರೇಸ್ ಮಾಡುತ್ತಿದ್ದರು. ಮೊಬೈಲ್ ಲೋಕೇಶನ್ ಮಾಹಿತಿಯಂತೆ ಆರೋಪಿಗಳು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿರುವುದು ಗೊತ್ತಾಗಿತ್ತು. ತಕ್ಷಣವೇ ರಾಮದುರ್ಗ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ರಾಮದುರ್ಗದ ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಪಿಎಸ್ಐ ಶಿವಾನಂದ ಕಾರಜೋಳ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
Last Updated : Feb 3, 2023, 8:24 PM IST