thumbnail

ರಾಜಸ್ಥಾನದಲ್ಲಿ ಆರೋಗ್ಯ ಹಕ್ಕು ಮಸೂದೆಗೆ ಖಾಸಗಿ ವೈದ್ಯರ ವಿರೋಧ- ವಿಡಿಯೋ

By

Published : Mar 28, 2023, 10:51 AM IST

ಜೈಪುರ : ರಾಜಸ್ಥಾನ ಸರ್ಕಾರ ವಿಧಾನಸಭೆಯಲ್ಲಿ ಆರೋಗ್ಯ ಹಕ್ಕು ಮಸೂದೆಯನ್ನು ಅಂಗೀಕರಿಸಿದ್ದು, ಈ ಬಗ್ಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದೆ. ಉದ್ದೇಶಿತ ಮಸೂದೆಯಿಂದ ವೈದ್ಯಕೀಯ ವಲಯದಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗುತ್ತದೆ ಎಂದು ಖಾಸಗಿ ವೈದ್ಯರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜಸ್ಥಾನ ಸರ್ಕಾರ ತಂದಿರುವ ಆರೋಗ್ಯ ಹಕ್ಕು ಮಸೂದೆಯನ್ನು ಹಿಂಪಡೆಯುವಂತೆ ಜೈಪುರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಯಿತು. ರ್‍ಯಾಲಿಯಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಮೆಡಿಕಲ್ ಶಾಪ್​ ಮಾಲೀಕರು ಸೇರಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಪ್ರತಿಭಟನಾ ರ್‍ಯಾಲಿಯು ಎಸ್​ಎಮ್​ಎಸ್​​ ಹಾಸ್ಪಿಟಲ್​​ನ ರೆಸಿಡೆಂಟ್​ ಡಾಕ್ಟರ್ಸ್​ ಹಾಸ್ಟೆಲ್​ ಮೈದಾನದಿಂದ ಆರಂಭವಾಗಿ, ಕೇಂದ್ರ ತಿರಹಾ, ಮಹಾರಾಣಿ ಕಾಲೇಜು ತಿರಹಾ, ಅಶೋಕ್​ ಮಾರ್ಗ ಮತ್ತು ಪಂಚ ಬಟ್ಟಿ ಮಾರ್ಗದ ಮೂಲಕ ಸಾಗಿತು.​ ಮಸೂದೆಯನ್ನು ಶೀಘ್ರವಾಗಿ ಹಿಂಪಡೆಯುವಂತೆ ಒತ್ತಾಯಿಸಿದರು.

ಕಳೆದ ಕೆಲವು ದಿನಗಳಿಂದ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿದ್ದು, ಖಾಸಗಿ ಆಸ್ಪತ್ರೆ, ನರ್ಸಿಂಗ್​ ಹೋಮ್​ಗಳು ಬಂದ್​ ಆಗಿವೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ದಟ್ಟನೆ ಉಂಟಾಗಿದೆ. ಸರ್ಕಾರಿ ವೈದ್ಯರು ಕೂಡ ಎರಡು ಗಂಟೆಗಳ ಕಾಲ ಖಾಸಗಿ ವೈದ್ಯರ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು ಸರ್ಕಾರಿ ವೈದ್ಯಕೀಯ ಸೇವೆಯಲ್ಲಿಯೂ ಕೆಲಕಾಲ ವ್ಯತ್ಯಯ ಉಂಟಾಗಿತ್ತು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಉಷಾ ಶರ್ಮಾ ಮತ್ತು ರಾಜ್ಯ ಸರ್ಕಾರದ  ಹಿರಿಯ ಅಧಿಕಾರಿಗಳು ಧರಣಿನಿರತ ಖಾಸಗಿ ಆಸ್ಪತ್ರೆಗಳ ನಿಯೋಗದೊಂದಿಗೆ ಸಭೆ ನಡೆಸಿದರು. ಮಸೂದೆಗೆ ಸಂಬಂಧಿಸಿದಂತೆ ಸಲಹೆ ಪಡೆದು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಆದರೆ ಖಾಸಗಿ ವೈದ್ಯರು ಮಸೂದೆ ವಾಪಸ್​ ಪಡೆಯುವಂತೆ ಪಟ್ಟು ಹಿಡಿದಿದ್ದಾರೆ.

ಆರೋಗ್ಯ ಹಕ್ಕು ಮಸೂದೆಯು ರಾಜ್ಯದ ಪ್ರತಿಯೊಬ್ಬ ನಿವಾಸಿಯು ಯಾವುದೇ "ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಪೂರ್ವ ಪಾವತಿ ಇಲ್ಲದೆ ತುರ್ತು ಚಿಕಿತ್ಸೆ ಮತ್ತು ಆರೈಕೆಯ ಹಕ್ಕನ್ನು ಹೊಂದಲು ಅರ್ಹರಾಗಿರುತ್ತಾನೆ ಎಂದು ಹೇಳಿದೆ.

 ಇದನ್ನೂ ಓದಿ : ಜಿಂಕೆ ರಕ್ಷಣೆಗೆ ಕ್ರಮ: ಮಾಂಸಹಾರಿ ಪ್ರಾಣಿಗಳಿಲ್ಲದ ಸಂರಕ್ಷಿತ ಪ್ರದೇಶಕ್ಕೆ ಬಿಡುಗಡೆ- ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.