ಜಲಪಾತದ ನೀರಿನ ರಭಸಕ್ಕೆ ಕೊಚ್ಚಿ ಹೋದ ಯುವಕ ಸಾವು - ಈಟಿವಿ ಭಾರತ ಕನ್ನಡ
🎬 Watch Now: Feature Video
Published : Sep 17, 2023, 11:06 PM IST
ಧರ್ಮಶಾಲಾ(ಹಿಮಾಚಲ ಪ್ರದೇಶ): ಜಲಪಾತದ ನೀರಿನ ರಭಸಕ್ಕೆ ಯುವಕನೋರ್ವ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಧರ್ಮಶಾಲಾದ ಭಗ್ಸು ಜಲಪಾತದಲ್ಲಿ ನಡೆದಿದೆ. ಪವನ್ ಕುಮಾರ್ (32) ಮೃತ ಯುವಕ. ಜಲಪಾತಕ್ಕೆ ಇಳಿದು ಸ್ನಾನ ಮಾಡಲು ನಾಲ್ವರು ಸ್ನೇಹಿತರು ತೆರಳಿದ್ದರು. ಈ ವೇಳೆ ಜಲಪಾತದಲ್ಲಿ ನೀರಿನ ಹರಿವು ದಿಢೀರ್ ಹೆಚ್ಚಾಗಿದೆ. ಸ್ಥಳೀಯರು ಎಲ್ಲಾ ಯುವಕರಿಗೆ ನೀರಿನಿಂದ ಬೇಗ ಹೊರಬರುವಂತೆ ತಿಳಿಸಿದ್ದಾರೆ. ನಾಲ್ವರು ಸ್ನೇಹಿತರು ನೀರಿನಿಂದ ಹೊರಬರಲು ಪ್ರಾರಂಭಿಸಿದ್ದಾರೆ. ಆದರೆ ಈ ವೇಳೆ ಒಬ್ಬ ಯುವಕ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.
ಯುವಕನ ಮೃತದೇಹವನ್ನು ಪೊಲೀಸರು ಜಲಪಾತದ ಸುಮಾರು 200 ಮೀಟರ್ ಕೆಳಗೆ ಪತ್ತೆ ಮಾಡಿದ್ದಾರೆ. ಯುವಕ ಸ್ನೇಹಿತರೊಂದಿಗೆ ಜಲಂಧರ್ ನಿಂದ ಮೆಕ್ಲಿಯೋಡ್ ಗಂಜ್ಗೆ ಬಂದಿದ್ದ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಎಸ್‌ಡಿಆರ್‌ಎಫ್ ಕಂಗ್ರಾ ಮತ್ತು ಸ್ಥಳೀಯ ಪೊಲೀಸ್ ತಂಡ ಯುವಕನ ಶವವನ್ನು ಜಲಪಾತದಿಂದ ಸುಮಾರು 200 ಮೀಟರ್ ಕೆಳಗೆ ಪತ್ತೆ ಮಾಡಿ ಹೊರಗೆ ತೆಗೆದಿದ್ದಾರೆ. ಧರ್ಮಶಾಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಎಎಸ್ಪಿ ಕಂಗ್ರಾ ವೀರ್ ಬಹದ್ದೂರ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ನಿಂತಿದ್ದ ಬೈಕ್ಗೆ ವಿರುದ್ಧ ದಿಕ್ಕಿನಲ್ಲಿ ಬಂದು ಗುದ್ದಿದ ಬಸ್.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ