ಡ್ರೆಸ್ಸಿಂಗ್‌ ರೂಂಗೆ ತೆರಳಿ ಸೋಲಿನ ನೋವಿನಲ್ಲಿದ್ದ ಭಾರತದ ಕ್ರಿಕೆಟಿಗರಿಗೆ ಧೈರ್ಯ ತುಂಬಿದ ಮೋದಿ- ವಿಡಿಯೋ - ವಿಶ್ವಕಪ್​ ಫೈನಲ್​ನಲ್ಲಿ ಭಾರತ ಸೋಲು

🎬 Watch Now: Feature Video

thumbnail

By ETV Bharat Karnataka Team

Published : Nov 21, 2023, 11:40 AM IST

ಅಹಮದಾಬಾದ್ (ಗುಜರಾತ್)​: ನವೆಂಬರ್​ 19ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ ಕ್ರಿಕೆಟ್ ಫೈನಲ್​ನಲ್ಲಿ ಭಾರತ ಸೋಲು ಕಂಡಿತು. ಟೀಂ ಇಂಡಿಯಾ ವಿರುದ್ಧ 6 ವಿಕೆಟ್​ಗಳಿಂದ ಆಸ್ಟ್ರೇಲಿಯಾ ಗೆಲುವು ದಾಖಲಿಸಿತು. ಸೋಲಿನ ಬಳಿಕ ಆತಿಥೇಯರು ನೋವಿನಲ್ಲಿದ್ದರು. ಈ ವೇಳೆ ಡ್ರೆಸ್ಸಿಂಗ್​ ರೂಮ್​ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಆಟಗಾರರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಈ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. 

ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಕೈ ಹಿಡಿದು, ಬೆನ್ನು ತಟ್ಟಿ ಸಮಾಧಾನಿಸಿದ ಮೋದಿ, "ಕ್ರೀಡೆ ಎಂದ ಮೇಲೆ ಸೋಲು, ಗೆಲುವು ಸಾಮಾನ್ಯ. ಕೆಲವೊಮ್ಮೆ ಈ ರೀತಿ ಆಗುತ್ತದೆ. ಬೇಸರ ಮಾಡಿಕೊಳ್ಳಬೇಡಿ" ಎಂದು ಸಂತೈಸಿದರು. ಬಳಿಕ ಎಲ್ಲಾ ಆಟಗಾರರಿಗೆ ಹಸ್ತಲಾಘವ ನೀಡಿ, ಉತ್ತಮವಾಗಿ ಆಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅವರನ್ನು ಎದೆಗಪ್ಪಿಕೊಂಡು ಸಮಾಧಾನ ಹೇಳಿದರು. ಕೇಂದ್ರ ಗೃಹ ಸಚಿವ ಅಮಿತ್​ ಶಾ ಕೂಡ ಜೊತೆ ಇದ್ದರು. 

ಇದನ್ನೂ ಓದಿ: 'ನಿನ್ನೆ ನಮ್ಮ ದಿನವಲ್ಲ': ಪ್ರಧಾನಿ ಸಾಂತ್ವನ ಹೇಳುತ್ತಿರುವ ಭಾವುಕ ಫೋಟೋ ಹಂಚಿಕೊಂಡ ಶಮಿ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.