ಕಾಶ್ಮೀರ ಕಣಿವೆಯಲ್ಲಿ ಪ್ಯಾರಾಗ್ಲೈಡಿಂಗ್: 5,330 ಅಡಿ ಎತ್ತರದಲ್ಲಿ ಸಾಹಸಮಯ ಹಾರಾಟ - ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ
🎬 Watch Now: Feature Video
ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ದೇಶದಾದ್ಯಂತ ಬಿಸಿಲಿನ ತಾಪ ತಾರಕಕ್ಕೇರುತ್ತಿರುವ ನಡುವೆ ಕಾಶ್ಮೀರ ಕಣಿವೆಯ ಪ್ಯಾರಾಗ್ಲೈಡಿಂಗ್ ಸ್ಥಳವಾದ ಅಸ್ತಾನ್ಮಾರ್ಗ್ ಟಾಪ್ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬಿಸಿಲಿನ ತಾಪದಿಂದ ಪಾರಾಗಲು ಪ್ರವಾಸಿಗರು ಕೂಲ್ ಆಗಿರುವ ಹಿಮದ ಕಣಿವೆಗಳಿಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಪ್ಯಾರಾ ಗ್ಲೈಡಿಂಗ್ ಈ ಬೇಸಿಗೆ ಕಾಲಕ್ಕೆ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿವೆ. 12 ರಿಂದ 15 ನಿಮಿಷಗಳ ಈ ಸಾಹಸಮಯ ಸವಾರಿಯುದ್ದಕ್ಕೂ ಅಂತ್ಯವಿಲ್ಲದ ಪರ್ವತಗಳ ಸಾಲು, ದಾಲ್ ಸರೋವರದ ಹೊಳೆಯುವ ನೀರಿನ ಸೌಂದರ್ಯ ನಿಮ್ಮನ್ನು ಇನ್ನಷ್ಟು ಮುದಗೊಳಿಸುತ್ತವೆ.
2014ರಲ್ಲಿ ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ, ಖಾಸಗಿ ಪ್ಯಾರಾಗ್ಲೈಡಿಂಗ್ ಕಂಪೆನಿ ಕಾರಕೋರಂ ಎಕ್ಸ್ಪ್ಲೋರರ್ಸ್ ಸಹಯೋಗದೊಂದಿಗೆ ಪ್ಯಾರಾ ಗ್ಲೈಡಿಂಗ್ ಕ್ರೀಡೆಯನ್ನು ನಡೆಸಿಕೊಂಡು ಬರುತ್ತಿದೆ. 2255 ಮೀ/7400 ಅಡಿ ಎತ್ತರದಲ್ಲಿರುವ ಹರ್ವಾನ್‌ನಿಂದ ಇಸ್ತಾನ್‌ಮಾರ್ಗ್‌ಗೆ 40 ನಿಮಿಷಗಳ ಚಾರಣ, ಪ್ರವಾಸಿಗರು ತಮ್ಮ ಸವಾರಿಯನ್ನು ಬುಕ್ ಮಾಡಿ ಹರ್ವಾನ್ ಗಾರ್ಡನ್ ಬಳಿ ಹಾಜರಾದರೆ ಅಲ್ಲಿಂದ ಅವರನ್ನು ಇಸ್ತಾನ್ ಮಾರ್ಗ್ನ ತುದಿಗೆ ಕರೆದೊಯ್ಯಲಾಗುತ್ತದೆ.
ಈ ಸಾಯಸಮಯ ಸವಾರಿಯನ್ನು ಆನಂದಿಸಲು ಅದರಲ್ಲೂ ಈ ಬೇಸಿಗೆ ಕಾಲದಲ್ಲಿ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಬಹುತೇಕ ಸಂಖ್ಯೆಯಲ್ಲಿ ಸ್ಥಳೀಯ ಹಾಗೂ ಹೊರಗಿನ ಪ್ರವಾಸಿಗರು ಆಗಮಿಸುತ್ತಾರೆ. ಮೇ ತಿಂಗಳಿನಿಂದ ಅಕ್ಟೋಬರ್ ಅಂತ್ಯದವರೆಗೆ ಮಾತ್ರ ಲಭ್ಯವಿರುವ ಈ ಪ್ಯಾರಾ ಗ್ಲೈಡಿಂಗ್ನಲ್ಲಿ ಕೈಗೆಟಕುವ ದರದಲ್ಲಿ 1,615 ಮೀಟರ್ (5,330 ಅಡಿ) ಎತ್ತರದಲ್ಲಿ, 12 ರಿಂದ 15 ನಿಮಿಷಗಳ ಸಾಹಸಮಯ ಸವಾರಿಯನ್ನು ಅನುಭವಿಸಬಹುದು. ಸವಾರಿಗೆ ಅಗತ್ಯವಿರುವ ಸುರಕ್ಷತಾ ಮುನ್ನೆಚ್ಚರಿಕೆ ಮತ್ತ ಅಗತ್ಯ ಉಪಕರಣಗಳ ಬಗ್ಗೆ ತಜ್ಞರು ಬ್ರೀಫಿಂಗ್ ನೀಡಿದ ನಂತರ ಗ್ಲೈಡರ್ನಲ್ಲಿ ಸವಾರಿ ನೀಡಲಾಗುತ್ತದೆ.
ಇದನ್ನೂ ನೋಡಿ: ನೀಲಕಂಠ ಪರ್ವತದಲ್ಲಿ ಹಿಮಪಾತ.. ಹಿಮರಾಶಿಯ ದೃಶ್ಯ ಸೆರೆ