ಸೇಲಂ: ಸ್ಟ್ಯಾನ್ಲಿ ಜಲಾಶಯದಿಂದ ಕಾವೇರಿ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ - Stanley Reservoir water released

🎬 Watch Now: Feature Video

thumbnail

By

Published : Aug 4, 2022, 12:07 PM IST

Updated : Feb 3, 2023, 8:25 PM IST

ಸೇಲಂ (ತಮಿಳುನಾಡು): ಜಿಲ್ಲೆಯ ಮೆಟ್ಟೂರಿನ ಸ್ಟ್ಯಾನ್ಲಿ ಜಲಾಶಯದಿಂದ ಕಾವೇರಿ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡುವುದಕ್ಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಕಳೆದ ಎರಡು ದಿನಗಳಿಂದ ನೆರೆಯ ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದ್ದು, ಅಣೆಕಟ್ಟೆ ಭರ್ತಿಯಾಗಿದೆ. ಹೀಗಾಗಿ ಅಧಿಕಾರಿಗಳು ಇಂದು ಬೆಳಗ್ಗೆ 9.30ಕ್ಕೆ ಸ್ಟ್ಯಾನ್ಲಿ ಜಲಾಶಯದಿಂದ ಸುಮಾರು 2 ಲಕ್ಷ ಕ್ಯೂಸೆಕ್ ನೀರು ಬಿಡಲು ಆರಂಭಿಸಿದ್ದಾರೆ. ಇದರಿಂದಾಗಿ ಕಾವೇರಿ ನದಿ ತೀರ ಮತ್ತು ತಗ್ಗು ಪ್ರದೇಶದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ನದಿ ಪಾತ್ರದ ಜನರು ನದಿಯ ತೆರಳದಂತೆ ಸೇಲಂ ಜಿಲ್ಲಾಧಿಕಾರಿ ಕಾರ್ಮೇಗಂ ಸೂಚಿಸಿದ್ದಾರೆ.
Last Updated : Feb 3, 2023, 8:25 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.