Video: ಮನೆಯ ಹಿತ್ತಲಿನಲ್ಲಿ 25 ಕ್ಕೂ ಹೆಚ್ಚು ನಾಗರಹಾವಿನ ಮರಿಗಳು ಪತ್ತೆ - ಹಾವಿನ ಮರಿಗಳು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18719293-thumbnail-16x9-news.jpg)
ಹುಬ್ಬಳ್ಳಿ: ಕಳೆದ ಹಲವಾರು ದಿನಗಳಿಂದ ಮನೆಯ ಸುತ್ತಮುತ್ತ ಓಡಾಡುತ್ತಿದ್ದ ನಾಗರಹಾವನ್ನು ಗಮನಿಸಿದ ಮಾಲೀಕರೊಬ್ಬರು ಉರಗ ತಜ್ಞರನ್ನು ಕರೆಯಿಸಿ ಹಾವು ಹಿಡಿಯಲು ಮುಂದಾದಾಗ ಬೆಚ್ಚಿಬಿದ್ದ ಘಟನೆಯೊಂದು ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ನಡೆದಿದೆ.
ಬಸವರಾಜ ಕಟ್ಟಿಮನಿ ಎಂಬುವರ ಮನೆಯ ಹಿತ್ತಲಿನಲ್ಲಿ ಕಳೆದ ಹಲವಾರು ದಿನಗಳಿಂದ ನಾಗರಹಾವೊಂದು ಓಡಾಟ ನಡೆಸಿತ್ತು. ಹಾವಿನ ನಡೆ ಗಮನಿಸಿದ ಕುಟುಂಬಸ್ಥರು ಉರಗ ತಜ್ಞರನ್ನು ಕರೆಸಿ ನಾಗಪ್ಪನನ್ನು ಹಿಡಿಯಲು ಮುಂದಾದರು. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ನೆಲದ ಅಡಿ ಅವಿತಿದ್ದ ನಾಗರಹಾವನ್ನು ಹಿಡಿಯುತ್ತಿದ್ದಂತೆ ಒಂದರ ಹಿಂದೆ ಒಂದರಂತೆ ಇಪ್ಪತ್ತೈದಕ್ಕೂ ಅಧಿಕ ಹಾವಿನ ಮರಿಗಳು ನೆಲದಿಂದ ಹೊರ ಬಂದಿವೆ.
ಕೆಲಕಾಲ ಹಾವಿನ ಮರಿಗಳನ್ನು ನೋಡಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶಾಕ್ ಆದರು. ಬಳಿಕ, ವಿಷಯ ತಿಳಿಯುತ್ತಿದ್ದಂತೆ ಜನ ನಾ ಮುಂದು, ತಾ ಮುಂದು ಎಂದು ಹಾವಿನ ಮರಿಗಳ ಫೋಟೋ, ವಿಡಿಯೋ ಮಾಡಲು ಮುಗಿಬಿದ್ದ ದೃಶ್ಯ ಕಂಡುಬಂದಿತು. ಹಾವು ಮತ್ತು ಮರಿಗಳನ್ನು ಸೆರೆ ಹಿಡಿದ ಉರಗ ತಜ್ಞ ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಇದನ್ನೂ ಓದಿ : ಮಧ್ಯಾಹ್ನದ ಬಿಸಿ ಊಟದಲ್ಲಿ ಹಾವು ಪತ್ತೆ: 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ