ಲಂಡನ್ನಿಂದ ಶಿವಾಜಿಯ ವಾಘ್ನಖ್ ಮರಳಿ ತರುವ ಒಪ್ಪಂದಕ್ಕೆ ಸಹಿ ಹಾಕಿದ ಮಹಾ ಸಚಿವರು - ಒಪ್ಪಂದಕ್ಕೆ ಸಹಿ ಹಾಕಿದ ಮಹಾ ಸಚಿವರು
🎬 Watch Now: Feature Video
Published : Oct 4, 2023, 2:33 PM IST
ಮುಂಬೈ/ಲಂಡನ್: ಲಂಡನ್ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿರುವ ಛತ್ರಪತಿ ಶಿವಾಜಿಯ ವಾಘ್ನಖ್ (Tiger Claw) ಅನ್ನು ಮರಳಿ ಭಾರತಕ್ಕೆ ತರುವ ಒಪ್ಪಂದಕ್ಕೆ ಮಹಾರಾಷ್ಟ್ರದ ಸಚಿವರಾದ ಸುಧೀರ್ ಮುಂಗಟಿವಾರ್ ಹಾಗೂ ಉದಯ್ ಸಾಮಂತ್ ಅವರು ಇಂದು ಸಹಿ ಹಾಕಿದ್ದಾರೆ. ಸಚಿವರಿಬ್ಬರು ಶೀಘ್ರದಲ್ಲಿ ವಾಘ್ನಖ್ನೊಂದಿಗೆ ಭಾರತಕ್ಕೆ ಮರಳಲಿದ್ದಾರೆ. ವಾಘ್ನಖ್ ಅನ್ನು ಮೂರು ವರ್ಷಗಳ ಅವಧಿಗೆ ಭಾರತಕ್ಕೆ ತರಲು ಲಂಡನ್ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನೊಂದಿಗೆ ಮಹಾರಾಷ್ಟ್ರ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ.
ಸಚಿವ ಸುಧೀರ್ ಮುಂಗಟಿವಾರ್ ಹಾಗೂ ಉದಯ್ ಸಾಮಂತ್ ಒಪ್ಪಂದಕ್ಕೆ ಸಹಿ ಹಾಕಿ ಹೊರ ಬರುತ್ತಿದ್ದಂತೆ ಲಂಡನ್ನಲ್ಲಿರುವ ಭಾರತೀಯರು ಬ್ಯಾಂಡ್, ವಾದ್ಯಗಳೊಂದಿಗೆ, ಜೈ ಭವಾನಿ, ಜೈ ಶಿವಾನಿ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಛತ್ರಪತಿ ಶಿವಾಜಿ ಮಹಾರಾಜ್ ಬಳಸುತ್ತಿದ್ದ, ಅಫ್ಜಲ್ ಖಾನ್ನನ್ನು ಕೊಲ್ಲಲು ಬಳಸಿದ್ದ ಐತಿಹಾಸಿಕ ಹಿನ್ನೆಲೆಯುಳ್ಳ ವಾಘ್ನಫ್ ಲಂಡನ್ನ ವಿಕ್ಟೋರಿಯಾ ಆಲ್ಬರ್ಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿದೆ. ಇತಿಹಾಸಕಾರ ಗ್ರಾಂಟ್ ಡಫ್ ಸತಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಸತಾರದ ಛತ್ರಪತಿ ಪ್ರತಾಪ್ ಸಿಂಗ್ ಮಹಾರಾಜ ವಾಘ್ ನಖ್ ಅನ್ನು ಅವರಿಗೆ ಬಹುಮಾನವಾಗಿ ನೀಡಿದ್ದರು. ಅದನ್ನು ಅವರು ಯುಕೆಗೆ ಹೋಗುವಾಗ ಅವರ ಜೊತೆಗೆ ಕೊಂಡೊಯ್ದಿದ್ದರು ಎಂದು ಹೇಳಲಾಗುತ್ತದೆ. ಇದೀಗ ಅದನ್ನು ಭಾರತಕ್ಕೆ ತರಲು ಮಹಾರಾಷ್ಟ್ರದ ಇಬ್ಬರು ಸಚಿವರು ಲಂಡನ್ಗೆ ತೆರಳಿದ್ದಾರೆ.
ಇದನ್ನೂ ಓದಿ : ಮ್ಯೂಸಿಯಂನಲ್ಲಿ ಶಿವಾಜಿ ಮಹಾರಾಜರ ’ವಾಘ್ ನಖ್’ ಪ್ರದರ್ಶನ: ಸುಧೀರ್ ಮುಂಗಂತಿವಾರ್