ಮಂಡ್ಯ: ಹೊತ್ತಿ ಉರಿದ ಮೆಡಿಸಿನ್ ಫಾರ್ಮ್, ಔಷಧ ನಾಶ - medicine farm caught fire in mandya
🎬 Watch Now: Feature Video
ಮಂಡ್ಯ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಮೆಡಿಸಿನ್ ಫಾರ್ಮ್ವೊಂದು ಹೊತ್ತಿ ಉರಿದ ಘಟನೆ ಮಂಡ್ಯದ ಅಶೋಕ್ ನಗರದಲ್ಲಿ ನಡೆದಿದೆ. ಇಲ್ಲಿನ ಲಕ್ಷಿ ಫಾರ್ಮ್ಗೆ ಬೆಂಕಿ ಬಿದ್ದಿದ್ದು, ಔಷಧಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಲೋಕನಂದಾ ಎಂಬುವರಿಗೆ ಸೇರಿದ ಫಾರ್ಮ್ ಇದಾಗಿದ್ದು, ದಸ್ತಾನಿನಲ್ಲಿದ್ದ ಮೆಡಿಸಿನ್ಸ್, ಫ್ರಿಡ್ಜ್, ಮೆಡಿಸಿನ್ ರ್‍ಯಾಕ್ ಸೇರಿದಂತೆ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಸುಮಾರು 1 ಕೋಟಿ 81 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗುಡಿಸಲಿಗೆ ಬೆಂಕಿ: ಸುಖ ನಿದ್ರೆಯಲ್ಲಿದ್ದ ಮೂವರು ಮಕ್ಕಳು, ದಂಪತಿ ದಾರುಣ ಸಾವು
ಕಳೆದ ಎರಡು ದಿನಗಳ ಹಿಂದಷ್ಟೇ ಮುಂಬೈಯ ಜೋಗೇಶ್ವರಿ ಪ್ರದೇಶದ ರಾಮಮಂದಿರ ಬಳಿಯ ಪೀಠೋಪಕರಣ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ಕುರಿತು ಮಾಹಿತಿ ಪಡೆದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದವು.
ಇದನ್ನೂ ಓದಿ: ಪೀಠೋಪಕರಣ ಗೋದಾಮಿನಲ್ಲಿ ಭಾರಿ ಬೆಂಕಿ ಅವಘಡ: ಓರ್ವ ಸಾವು