ಅಯೋಧ್ಯೆ ಶ್ರೀರಾಮನ ಸನ್ನಿಧಿಯಲ್ಲಿ ಮಹಾ ಸಿಎಂ ಶಿಂಧೆ, ಡಿಸಿಎಂ ಫಡ್ನವೀಸ್: ವಿಡಿಯೋ - ಅಯೋಧ್ಯೆ ರಾಮಮಂದಿರಕ್ಕೆ ಭೇಟಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18207552-thumbnail-16x9-don.jpg)
ಅಯೋಧ್ಯೆ (ಉತ್ತರ ಪ್ರದೇಶ): ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿದರು. ಶಾಸಕರು, ಬೆಂಬಲಿಗರ ಸಮೇತವಾಗಿ ಅಯೋಧ್ಯೆಗೆ ಭೇಟಿ ನೀಡಿರುವ ಸಿಎಂ ಏಕನಾಥ್ ಶಿಂಧೆ ಅವರು, ಜಗತ್ರಕ್ಷಕ ಶ್ರೀರಾಮನ ಆಶೀರ್ವಾದ ಪಡೆದರು. ಮಹಾರಾಷ್ಟ್ರ ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಅವರು ಕ್ಷೇತ್ರಪಾಲಕನ ಸನ್ನಿಧಾನಕ್ಕೆ ಬಂದರು.
ಶ್ರೀರಾಮನ ಆಶೀರ್ವಾದ ನಮ್ಮೊಂದಿಗಿದೆ. ಅದಕ್ಕಾಗಿಯೇ ನಾವು ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಪಡೆದುಕೊಂಡಿದ್ದೇವೆ ಎಂದು ಅಯೋಧ್ಯೆಗೆ ತೆರಳುವ ಮುನ್ನ ಏಕನಾಥ್ ಶಿಂಧೆ ಹೇಳಿದರು. ರಾಮನ ಆಶೀರ್ವಾದ ಪಡೆಯಲು ಅಯೋಧ್ಯೆಗೆ ಹೋಗುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ದೇವೇಂದ್ರ ಫಡ್ನವೀಸ್ ಹೇಳಿದರು.
ಲಖನೌ ವಿಮಾನ ನಿಲ್ದಾಣದಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರು ಬೆಂಬಲಿಗರ ಘೋಷಣೆಯ ಮಧ್ಯೆ ಏಕನಾಥ್ ಶಿಂಧೆ ಅವರನ್ನು ಸ್ವಾಗತಿಸಿದರು. ಸರಯೂ ನದಿಯ ದಡದಲ್ಲಿ 'ಗಂಗಾರತಿ' ಮಾಡಲಿದ್ದಾರೆ. ರಾಮಮಂದಿರ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೂ ಭೇಟಿ ನೀಡಲಿದ್ದಾರೆ. ಶಿಂಧೆ ಅವರನ್ನು ಸ್ವಾಗತಿಸಲು ಶಿವಸೇನೆ ಅಯೋಧ್ಯೆಯಲ್ಲಿ ಶಿಂಧೆ ಅವರಿದ್ದ ದೊಡ್ಡ ಬ್ಯಾನರ್‌ಗಳನ್ನು ಹಾಕಿದೆ.
ಓದಿ: ರುಚಿಯಾದ ಅಲ್ಫಾನ್ಸೊ ಮಾವು ಖರೀದಿಗೆ EMI ಸೌಲಭ್ಯ: ನೀವೂ ಟ್ರೈ ಮಾಡಿ