ನವಲಗುಂದ ಕ್ಷೇತ್ರದಲ್ಲಿ 'ಧಮ್ ಪಾಲಿಟಿಕ್ಸ್': ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ವಾಕ್ಸಮರ
🎬 Watch Now: Feature Video
ಧಾರವಾಡ: ರೈತ ಬಂಡಾಯದ ನೆಲದಲ್ಲಿ ಈಗ ಆಣೆ ಪ್ರಮಾಣದ ಧಮ್ ಪಾಲಿಟಿಕ್ಸ್ ನಡೆಯುತ್ತಿದೆ. ಧಾರವಾಡ ಜಿಲ್ಲೆಯ ನವಲಗುಂದ ಕ್ಷೇತ್ರದಲ್ಲಿ ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್.ಕೋನ ರೆಡ್ಡಿ ಹಾಗೂ ಬಿಜೆಪಿ ಅಭ್ಯರ್ಥಿ ಶಂಕರ್ ಪಾಟೀಲ್ ಮುನೇನಕೊಪ್ಪ ನಡುವೆ ವಾಕ್ಸಮರ ನಡೆಯುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿ ಕೋನರೆಡ್ಡಿ, ಮಹದಾಯಿ ಜಾರಿ ವಿಚಾರಕ್ಕೆ ನವಲಗುಂದ ನಾಗಲಿಂಗನ ಮುಂದೆ ಬಂದು ಪ್ರಮಾಣ ಮಾಡಲು ಸವಾಲು ಹಾಕಿದ್ದರು. ಆದರೆ ಶಂಕರ ಪಾಟೀಲ ಮುನೇನಕೊಪ್ಪ ಸವಾಲು ಸ್ವೀಕರಿಸಲಿಲ್ಲ. ನಮ್ಮ ಸವಾಲು ಸ್ವೀಕರಿಸಲು ಧಮ್ ಬೇಕು ಅಂತಾ ಕೋನರಡ್ಡಿ ಲೇವಡಿ ಮಾಡಿದ್ದಾರೆ.
ಯಾರ ಧಮ್ ಏನಿದೆ ಅಂತಾ ಕ್ಷೇತ್ರದ ಜನರಿಗೆ ಗೊತ್ತೆಂದು ಮುನೇನಕೊಪ್ಪ ತಿರುಗೇಟು ನೀಡಿದ್ದು, ಜನರಿಗೆ ಲಾಠಿ ಏಟು ಕೊಟ್ಟವರು ನಮ್ಮ ಧಮ್ ಕೇಳ್ತಾರಾ ಅಂತಾ ಮುನೇನಕೊಪ್ಪ ಪ್ರಶ್ನೆ ಮಾಡಿ ಕೋನರಡ್ಡಿಗೆ ಮುನೇನಕೊಪ್ಪ ಪ್ರತಿ ಸವಾಲು ಹಾಕಿದ್ದಾರೆ.
ಸದ್ಯ ನವಲಗುಂದ ಕ್ಷೇತ್ರದಲ್ಲಿ ಮಹದಾಯಿ ಜಾರಿ ವಿಚಾರ ತೀವ್ರ ಕಾವು ಪಡೆದುಕೊಂಡಿದೆ. ಅವತ್ತು ರೈತರಿಗೆ ಲಾಠಿ ಏಟು ಕೊಟ್ಟಾಗ ಅಳುತ್ತಾ ಕುಳಿತವರು ಯಾರು, ಮಾಧ್ಯಮಗಳ ಮುಂದೆ ಅಳುತ್ತಾ ಕುಳಿತವರು ಇವರೇ ಅಲ್ವಾ? ಇವರು ನಮ್ಮ ಧಮ್ ಕೇಳ್ತಾರಾ? ಎಂದು ಮುನೇನಕೊಪ್ಪ ಕೊನರೆಡ್ಡಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂಓದಿ:ಮೋದಿ ರೋಡ್ ಶೋದಿಂದ ಯಾವುದೇ ಪ್ರಯೋಜನವಿಲ್ಲ: ಹೆಚ್.ಡಿ.ದೇವೇಗೌಡ