Lok sabha election: ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ : ಅಶ್ವತ್ಥನಾರಾಯಣ್ - ಈಟಿವಿ ಭಾರತ ಕನ್ನಡ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/27-06-2023/640-480-18860517-thumbnail-16x9-yyy.jpg)
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು 28ಕ್ಕೆ 28 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಮಾಜಿ ಸಚಿವ ಡಾ ಅಶ್ವತ್ಥ ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಲ್ಲಿನ ವಿಮಾನ ನಿಲ್ದಾಣದ ಬಳಿ ಇರುವ ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆಗೆ ಭೇಟಿ ನೀಡಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನ ಬಣ್ಣ ಬಯಲಾಗಿದೆ. ಬೆಲೆ ಏರಿಕೆ, ವಿದ್ಯುತ್ ಬಿಲ್ ಏರಿಕೆಯಿಂದ ಜನ ಕಂಗೆಟ್ಟಿದ್ದಾರೆ. ಕಾಂಗ್ರೆಸ್ ನಲ್ಲಿ ಉತ್ತಮ ವರಿಷ್ಠರಿದ್ದಾರೆ ಎಂದು ಯಾರು ವೋಟ್ ಹಾಕಿಲ್ಲ. ಗ್ಯಾರಂಟಿ ಮತ್ತು ಕೂಪನ್ ನೋಡಿ ಜನ ಮತ ನೀಡಿದರು. ಆದರೆ ಈಗ ಗ್ಯಾರಂಟಿಯಲ್ಲೂ ಮೋಸ, ಕೂಪನ್ನಲ್ಲೂ ಮೋಸ ಎಂದು ಟೀಕಿಸಿದರು.
ಅನ್ನಭಾಗ್ಯ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಒಂದು ಕೆಜಿ ಅಕ್ಕಿಯನ್ನು ಕಾಂಗ್ರೆಸ್ ಸರ್ಕಾರ ಕೊಟ್ಟಿಲ್ಲ. ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿ ಮಾತ್ರ ಜನರಿಗೆ ತಲುಪುತ್ತಿದೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರನ್ನು ಮತ್ತು ಕಾಂಗ್ರೆಸ್ನವರನ್ನು ಹುಡುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಆದರೆ ಹಳೆ ಬಸ್ಗಳನ್ನು ಬಿಟ್ಟಿದ್ದಾರೆ. ಈ ಬಸ್ಗಳು ಅಲ್ಲಲ್ಲಿ ನಿಂತು ಹೋಗಿ ಜನ ಪರದಾಡುತ್ತಿದ್ದಾರೆ. ಈ ಯೋಜನೆ ಸ್ವಲ್ಪ ಅಲ್ಲಲ್ಲಿ ಕಾಣುತ್ತಿದೆ ಎಂದು ಹೇಳಿದರು. ಇಂದು ಕೆಂಪೇಗೌಡರ ಜಯಂತಿ. ದ್ವೇಷದ ವೈಮನಸ್ಸಿನ ದಿನವಾಗಬಾರದು. ನಾನು ಡಿಕೆಶಿ ಅವರಿಗೂ ಶುಭಾಶಯ ಕೋರುತ್ತೇನೆ. ಅವರು ಕೆಂಪೇಗೌಡರಿಂದ ಪ್ರೇರಣೆ ಪಡೆದು ನಾಡಿಗೆ ಒಳ್ಳೆಯದನ್ನು ಮಾಡಲಿ ಎಂದು ಮಾಜಿ ಸಚಿವ ಅಶ್ವತ್ಥನಾರಾಯಣ್ ಹೇಳಿದರು.
ಇದನ್ನೂ ಓದಿ : ಮಾಜಿ ಸಚಿವ ಅಶ್ವಥ್ ನಾರಾಯಣ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ