ರಸ್ತೆಯಲ್ಲಿ ವಾಹನ ಸವಾರನಿಗೆ ಎದುರಾದ ಚಿರತೆ: ಮೊಬೈಲ್ ಕ್ಯಾಮರಾದಲ್ಲಿ ದೃಶ್ಯ ಸೆರೆ - Leopard spotted on the road
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17497105-thumbnail-3x2-meg.jpg)
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಡೇನಹಳ್ಳಿ ಮೂಲಕ ತೊರೆಹಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸವಾರನಿಗೆ ಎದುರಾದ ಚಿರತೆಯೊಂದು ರಾಜಾ ರೋಷವಾಗಿ ರಸ್ತೆ ದಾಟುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಡೇನಹಳ್ಳಿ ತೊರೆಹಳ್ಳಿ ಜವರೇಗೌಡನ ಪಾಳ್ಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಮನೆಯಲ್ಲಿ ಸಾಕಿದಂತಹ ಕೋಳಿ ಕುರಿ ದನ ಕರುಗಳನ್ನು ತಿಂದಿರುವ ಘಟನೆ ಬಹಳಷ್ಟು ನಡೆದಿದೆ. ಇದೀಗ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿರುವುದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಗ್ರಾನಕ್ಕೆ ಚಿರತೆ ದಾಳಿದಾಗ ಅರಣ್ಯ ಇಲಾಖೆ ಮಾಹಿತಿ ನೀಡಲಾಗಿತ್ತು. ಆದರೆ, ಯಾವುದೇ ಚಿರತೆ ಹಿಡಿಯದೆ ಕಾಟಾಚಾರಕ್ಕೆ ಬೋನ್ ಇಟ್ಟು ಕೈತೊಳೆದುಕೊಂಡಿದ್ದರು. ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆಯನ್ನು ಶೀಘ್ರದಲ್ಲಿ ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.