ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದ ತುತ್ತತುದಿಯಲ್ಲಿ ಬೆಳಗಿದ ಜ್ಯೋತಿ - Lamp lit at the top of Sivaganga Hill
🎬 Watch Now: Feature Video
ಕಾರ್ತಿಕ ಮಾಸದ ನಿಮಿತ್ತ ನೆಲಮಂಗಲ ಸಮೀಪದ ಶಿವಗಂಗೆ ಬೆಟ್ಟದ ತುತ್ತತುದಿಯಲ್ಲಿರುವ ಕಲ್ಲಿನ ಕಂಬದಲ್ಲಿ ಜ್ಯೋತಿ ಬೆಳಗಿಸಲಾಯಿತು. ಸಮುದ್ರ ಮಟ್ಟದಿಂದ 4600 ಅಡಿ ಎತ್ತರದಲ್ಲಿ ಉರಿಯುವ ಈ ದೀಪ ಸುತ್ತಮುತ್ತಲಿನ ನೂರಾರು ಗ್ರಾಮಗಳಿಗೆ ಜ್ಯೋತಿಯ ದರ್ಶನ ನೀಡಿತು. ಮಾರ್ಗಶಿರ ಮಾಸದ ಕೃತಿಕಾ ನಕ್ಷತ್ರದಲ್ಲಿ ಗಿರಿ ದೀಪ (ಶಿವ ದೀಪ) ವೈಭವದ ಅಂಗವಾಗಿ ಶಿವಗಂಗೆ ಬೆಟ್ಟದಲ್ಲಿ ಶ್ರೀಗಂಗಾಧರೇಶ್ವರ ಮತ್ತು ಹೊನ್ನಮ್ಮ ದೇವಿಯ ಆರಾಧನೆ ಸಲುವಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಮುಜರಾಯಿ ಇಲಾಖೆ ಸಹಯೋಗದಲ್ಲಿ ದೀಪೋತ್ಸವ ನಡೆಯುತ್ತಿದೆ.
Last Updated : Feb 3, 2023, 8:35 PM IST