ಕೊಬ್ಬರಿ ಹೋರಿ 'ಮೈಸೂರು ಹುಲಿ' ಪುಣ್ಯತಿಥಿ: ಇಷ್ಟದ ಆಹಾರ ಸಮರ್ಪಿಸಿ ಪೂಜೆ - ಈಟಿವಿ ಭಾರತ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17683257-thumbnail-4x3-tha.jpg)
ಹಾವೇರಿ: ಮೈಸೂರು ಹುಲಿ ಎಂದೇ ಖ್ಯಾತವಾಗಿದ್ದ ಕೊಬ್ಬರಿ ಹೋರಿಯು ಜನವರಿ 29 ರಂದು ಅಸುನೀಗಿತ್ತು. ಇದರ ಪುಣ್ಯತಿಥಿಯನ್ನು ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ನಡೆಸಲಾಯಿತು. ಮೈಸೂರು ಹುಲಿ ಭಾವಚಿತ್ರ ಇಟ್ಟು ಅದಕ್ಕೆ ಪುಷ್ಪಗಳಿಂದ ಅಲಂಕಾರ ಮಾಡಿದ ಮನೆಯ ಸದಸ್ಯರು ಪೂಜೆ ಸಲ್ಲಿಸಿದರು.
ಮೈಸೂರು ಹುಲಿಯ ಅಭಿಮಾನಿಗಳು ಆಗಮಿಸಿ ನೆಚ್ಚಿನ ಹೋರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಪುಷ್ಪಮಾಲೆ ಹಾಕಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಮೈಸೂರು ಹುಲಿಯ ನೆನೆದು ಮನೆಯ ಸದಸ್ಯರು ದುಃಖಿತರಾದರು. ಹೋರಿಗೆ ಹಾಕುತ್ತಿದ್ದ ಉಡುಪುಗಳನ್ನು, ಆಭರಣಗಳನ್ನು ಭಾವಚಿತ್ರದ ಮುಂದೆ ಇಟ್ಟು ಪೂಜೆ ಸಲ್ಲಿಸಲಾಯಿತು.
ಮೈಸೂರು ಹುಲಿಯ ನೆಚ್ಚಿನ ಆಹಾರಗಳಾಗಿದ್ದ ಗೋವಿನಜೋಳ, ಹುರುಳಿಯನ್ನಿಟ್ಟು ನೈವೇದ್ಯ ಸಮರ್ಪಿಸಲಾಯಿತು. ಹೋರಿ ದನಬೆದರಿಸುವ ಸ್ಪರ್ಧೆಯಲ್ಲಿ ಗೆದ್ದು ತಂದ ಬೈಕ್‌ಗಳಿಗೆ ಹೂವಿನ ಮಾಲೆ ಹಾಕಿ ಪೂಜೆ ಸಲ್ಲಿಸಲಾಯಿತು. ಬಳಿಕ ಮೈಸೂರು ಹುಲಿ ಅಂತ್ಯಕ್ರಿಯೆ ನಡೆದ ಸಮಾದಿಗೆ ಮನೆಯ ಸದಸ್ಯರು ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ಆಕಸ್ಮಿಕ ಬೆಂಕಿಯಿಂದ ಸುಟ್ಟು ಕರಕಲಾದ ಜೋಳದ ತೆನೆ ರಾಶಿ.. ಮನಕಲಕುವಂತಿದೆ ರೈತನ ಆಕ್ರಂದನ