ಪ್ಯಾಂಟ್, ಶರ್ಟ್ ಎಲ್ಲೆಲ್ಲೂ ಚಿನ್ನ.. 1.7 ಕೆಜಿ ಬಂಗಾರ ಕಳ್ಳಸಾಗಣೆ ಮಾಡುತ್ತಿದ್ದ ಚಾಲಾಕಿ ಬಂಧನ - ಪ್ಯಾಂಟ್ ಮತ್ತು ಟೀ ಶರ್ಟ್ನಲ್ಲಿ ಚಿನ್ನ ಕಳ್ಳಸಾಗಣೆ
🎬 Watch Now: Feature Video
ಮಲಪ್ಪುರಂ(ಕೇರಳ): ಪ್ಯಾಂಟ್ ಮತ್ತು ಟೀ ಶರ್ಟ್ನಲ್ಲಿ ಸುಮಾರು ಒಂದು ಕೋಟಿ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಕೋಝಿಕ್ಕೋಡ್ ಜಿಲ್ಲೆಯ ವಡಕರ ಮೂಲದ ಮುಹಮ್ಮದ್ ಸಫ್ವಾನ್ (37) ಬಂಧಿತ ಆರೋಪಿ. ಇಂದು ಬೆಳಗ್ಗೆ 8.30ಕ್ಕೆ ದುಬೈನಿಂದ ಇಂಡಿಗೋ ವಿಮಾನದಲ್ಲಿ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ.
ಬಳಿಕ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯಿಂದ ತಪ್ಪಿಸಿಕೊಂಡಿದ್ದಾನೆ. ಆದರೆ, ಮಲಪ್ಪುರಂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಎಸ್. ಸುಜಿತ್ ದಾಸ್ ನೀಡಿದ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಈತ 1.7 ಕೆಜಿ ಚಿನ್ನವನ್ನು ಉಡುಪಿನಲ್ಲಿ ಲೇಪಿಸಿಕೊಂಡು ಪ್ರಯಾಣಿಸಿದ್ದ. ಈ ವರ್ಷದಲ್ಲಿ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಪೊಲೀಸರಿಗೆ ಸಿಕ್ಕಿಬಿದ್ದ ಚಿನ್ನ ಕಳ್ಳಸಾಗಣೆಯ 12ನೇ ಪ್ರಕರಣ ಇದಾಗಿದೆ.
ಇದನ್ನೂ ಓದಿ: ಚಪ್ಪಲಿ, ಬನಿಯನ್, ಕಾರ್ಟನ್ ಬಾಕ್ಸ್ನಲ್ಲಿಟ್ಟು ಗೋಲ್ಡ್ ಸ್ಮಗ್ಲಿಂಗ್.. ಮಂಗಳೂರು ಏರ್ಪೋರ್ಟ್ನಲ್ಲಿ ಚಿನ್ನ ವಶಕ್ಕೆ