ಖಾಸಗಿ ಜಾಗದಲ್ಲಿ ಮರಿಹಾಕಿದ ಕಾಡು ಹಂದಿ.. ಮರಿಗಳನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು - piglets rescue
🎬 Watch Now: Feature Video
ಮಲಪ್ಪುರಂ (ಕೇರಳ): ಮಲಪ್ಪುರಂನ ಪೋರೂರಿನ ಪಳ್ಳಿಕುನ್ನು ಎಂಬಲ್ಲಿ ಸಾರ್ವಜನಿಕ ರಸ್ತೆ ಬದಿಯ ಖಾಸಗಿ ಆಸ್ತಿಯಲ್ಲಿ ಕಾಡುಹಂದಿ ಏಳು ಮರಿಗಳಿಗೆ ಜನ್ಮ ನೀಡಿದೆ. ಮರಿಗಳನ್ನು ಸಾಕುತ್ತಿದ್ದ ಕಾಡು ಹಂದಿಯನ್ನು ಗಮನಿಸಿದ ಅರಣ್ಯಾಧಿಕಾರಿಗಳು ಪಟಾಕಿ ಸಿಡಿಸಿ ಹಂದಿಯನ್ನು ಅಟ್ಟಿಸಿಕೊಂಡು ಹೋಗಿ ನಂತರ ಮರಿಗಳನ್ನು ರಕ್ಷಿಸಿದ್ದಾರೆ. ನವಜಾತ ಮರಿಗಳನ್ನು ಹೊಂದಿರುವ ಹಂದಿಯು ಸಾಮಾನ್ಯವಾಗಿ ಬಹಳ ಆಕ್ರಮಣಕಾರಿಯಾಗಿರುತ್ತದೆ ಮತ್ತು ಜನರ ಮೇಲೆ ದಾಳಿ ಮಾಡುತ್ತದೆ ಎಂದು ಅರಣ್ಯ ಅಧಿಕಾರಿಗಳು ತಾಯಿ ಹಂದಿಯನ್ನು ಓಡಿಸಿ ಮರಿಗಳನ್ನು ರಕ್ಷಿಸಿದ್ದಾರೆ. ನಂತರ ಅರಣ್ಯಾಧಿಕಾರಿಗಳು ಮರಿಗಳನ್ನು ಕಾಡಿಗೆ ಬಿಟ್ಟಿದ್ದಾರೆ. ಕಾಡು ಹಂದಿಯು ಮರಿಗಳನ್ನು ಹುಡುಕಿಕೊಂಡು ಹಿಂತಿರುಗಿ ಬರುವ ಸಾಧ್ಯತೆಯಿದೆ. ಹಾಗಾಗಿ ಹಂದಿಯಿಂದ ದಾಳಿಯಾಗಬಹುದು, ಜಾಗರೂಕರಾಗಿರಿ ಎಂದು ಅರಣ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
Last Updated : Feb 3, 2023, 8:24 PM IST