ಸೆಲೆಬ್ರಿಟಿ ಕ್ರಿಕೆಟ್ ಲೀಗ್: ರಾಯ್ಪುರಕ್ಕೆ ಹಾರಿದ ಕರ್ನಾಟಕ ಬುಲ್ಡೋಜರ್ಸ್ ತಂಡ - ಈಟಿವಿ ಭಾರತ ಕನ್ನಡ
🎬 Watch Now: Feature Video
ದೇವನಹಳ್ಳಿ: ಕ್ರೀಡೆ ಮತ್ತು ಮನರಂಜನೆ ಒದಗಿಸುತ್ತಿರುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಈ ಬಾರಿ ರಾಯ್ಪುರದಲ್ಲಿ ನಡೆಯುತ್ತಿದ್ದು, ಕರ್ನಾಟಕ ಬುಲ್ಡೋಜರ್ ತಂಡ ಇಂದು ಛತ್ತೀಸ್ಗಢದತ್ತ ಪ್ರಯಾಣ ಬೆಳೆಸಿತು. ಸಂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ತಂಡ 5.20 ರ ಸುಮಾರಿಗೆ ರಾಯ್ಪುರಕ್ಕೆ ವಿಮಾನವೇರಿದರು. ತಂಡದ ನಾಯಕ ನಟ ಪ್ರದೀಪ್ ಮಾತನಾಡಿ, ಈ ಬಾರಿ ಒಂದು ತಿಂಗಳಿನಿಂದ ನಟ ಕಿಚ್ಚ ಸುದೀಪ್ ನೇತೃತ್ವದಲ್ಲಿ ಸಾಕಷ್ಟು ತರಬೇತಿ ಪಡೆದಿದ್ದೇವೆ. 18 ರಂದು ಬೆಂಗಾಲಿ ಟೈಗರ್ಸ್ ಜೊತೆ ಮೊದಲ ಪಂದ್ಯವಿದೆ. ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಸಿಸಿಎಲ್ ಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಹಿಳಾ ಪ್ರೀಮಿಯರ್ ಲೀಗ್ 2023: ಆರ್ಸಿಬಿ ಮೆಂಟರ್ ಆಗಿ ಮೂಗುತಿ ಸುಂದರಿ ಸಾನಿಯಾ ಆಯ್ಕೆ