ಮಹಿಳಾ ಪ್ರೀಮಿಯರ್ ಲೀಗ್ 'ಶಕ್ತಿ' ಅನಾವರಣ: ವಿಡಿಯೋ - ಮ್ಯಾಸ್ಕಾಟ್ ಶಕ್ತಿ
🎬 Watch Now: Feature Video
WPL-2023: ದೇಶದ ಮೊದಲ ಮಹಿಳಾ ಪ್ರೀಮಿಯರ್ ಲೀಗ್ಗೆ ಮಾ.4 ರಂದು ಚಾಲನೆ ಸಿಗಲಿದೆ. ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಮೊದಲ ಪಂದ್ಯ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಗುರುವಾರ ಮಹಿಳಾ ಪ್ರೀಮಿಯರ್ ಲೀಗ್‌ನ ಮ್ಯಾಸ್ಕಾಟ್ 'ಶಕ್ತಿ'ಯನ್ನು ಅನಾವರಣಗೊಳಿಸಿದರು.
ಟ್ವಿಟರ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು "ಶಕ್ತಿಯನ್ನು 'ಫಾಸ್ಟ್, ಫಿಯರ್ಸ್ ಮತ್ತು ಫುಲ್ ಆಫ್ ಫೈರ್' ಎಂದು ಕರೆದಿದ್ದಾರೆ. 30 ಸೆಕೆಂಡುಗಳ ವಿಡಿಯೋದಲ್ಲಿ ಶಕ್ತಿ ಮೈದಾನದ ಎಲ್ಲಾ ಭಾಗಗಳಲ್ಲಿ ಸಿಕ್ಸರ್‌ಗಳನ್ನು ಸಿಡಿಸುವುದನ್ನು ಕಾಣಬಹುದು. ಆಕೆಯ ಕಣ್ಣುಗಳಲ್ಲಿ ಹರ್ಮನ್‌ಪ್ರೀತ್ ಕೌರ್ ಮತ್ತು ಮಂಧಾನರಂತೆ ಉತ್ಸಾಹವಿದೆ. "ಇದು ಕೇವಲ ಆರಂಭ" ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋವನ್ನು ಜನರು ಇಷ್ಟಪಡುತ್ತಿದ್ದಾರೆ. ಅದರಲ್ಲಿ ಸ್ತ್ರೀ ಶಕ್ತಿ ಕಾಣುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಮುಂಬೈನಲ್ಲಿ ನಡೆಯುವ ಎಲ್ಲಾ ಡಬ್ಲ್ಯೂಪಿಎಲ್ ಪಂದ್ಯಗಳಲ್ಲಿ ಮಹಿಳೆಯರಿಗೆ ಪ್ರವೇಶವನ್ನು ಮುಕ್ತವಾಗಿಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರ್ಧರಿಸಿದೆ.
ಇದನ್ನೂ ಓದಿ: ಮಹಿಳಾ ಪ್ರೀಮಿಯರ್ ಲೀಗ್: ಮುಂಬೈ ಇಂಡಿಯನ್ಸ್‌ಗೆ ಹರ್ಮನ್‌ಪ್ರೀತ್ ಕೌರ್ ನಾಯಕಿ