ಪುರಿ ಕಡಲ ತೀರದ ಮರಳಿನಲ್ಲಿ ಅರಳಿದ ವಿಶ್ವಕಪ್ ಟ್ರೋಫಿ; ನೋಡಿ ಸುದರ್ಶನ್ ಪಟ್ನಾಯಕ್ ಕೈಚಳಕ
🎬 Watch Now: Feature Video
ಪುರಿ (ಒಡಿಶಾ): ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ 2023ರ ಫೈನಲ್ ಪಂದ್ಯ ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ತಮ್ಮ ವಿಶಿಷ್ಟ ಶೈಲಿಯೊಂದಿಗೆ ಟೀಮ್ ಇಂಡಿಯಾಗೆ 'ಗುಡ್ ಲಕ್' ಎಂದು ಹಾರೈಸಿದರು. ಸೂರದಾಸನ್ ಪುರಿ ಬೀಚ್‌ನಲ್ಲಿ ಸುಂದರವಾದ ಮರಳು ಕಲೆಯನ್ನು ರಚಿಸಿ ಭಾರತ ತಂಡದ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಸುದರ್ಶನ್ ಅವರು 500ಕ್ಕೂ ಉಕ್ಕಿನ ಬಟ್ಟಲು ಮತ್ತು 300 ಚೆಂಡುಗಳನ್ನು ಬಳಸಿ ಈ ಮರಳಿನ ಕಲಾಕೃತಿಯನ್ನು ರಚಿಸಿದ್ದಾರೆ. ಪುರಿಯ ನೀಲಾದ್ರಿ ತಟದಲ್ಲಿ 56 ಅಡಿ ಎತ್ತರದ ವಿಶ್ವಕಪ್ ಪ್ರತಿಕೃತಿ ನಿರ್ಮಿಸಿದ್ದಾರೆ.
ಸುದರ್ಶನ್ ಪಟ್ನಾಯಕ್ ಪುರಿ ಕಡಲ ತೀರದಲ್ಲಿ ಇದಕ್ಕೂ ಮುನ್ನ ವಿಭಿನ್ನ ಕಲಾಕೃತಿಗಳನ್ನು ಮಾಡಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ, ಶ್ರೇಷ್ಠ ವ್ಯಕ್ತಿಗಳ ಜನ್ಮದಿನದಂದು ಈ ರೀತಿಯ ಮರಳಿನ ಕಲಾಕೃತಿಯನ್ನು ಮಾಡುತ್ತಿರುತ್ತಾರೆ. ವಿಶ್ವಕಪ್ ಫೈನಲ್ಗೂ ಮುನ್ನ ಮರಳಿನಲ್ಲಿ ಪ್ರತಿಕೃತಿ ಮಾಡಿ ಭಾರತ ತಂಡಕ್ಕೆ ವಿಶ್ವಕಪ್ ಗೆಲ್ಲುವಂತೆ ಆಶಿಸಿದ್ದಾರೆ. ಈ ವೇಳೆ, ಮಾತನಾಡಿದ ಕಲಾವಿದ ಸುದರ್ಶನ್ ಪಟ್ನಾಯಕ್, "ಭಾರತ ಈ ವರೆಗೆ ಉತ್ತಮವಾಗಿ ಆಡಿಕೊಂಡು ಬಂದಿದೆ, ವಿಶ್ವಕಪ್ ಗೆಲ್ಲುತ್ತದೆ. ಮಹಾದೇವನಲ್ಲಿ ನಾವು ಪ್ರಶಸ್ತಿ ಗೆಲ್ಲಬೇಕು ಎಂದು ಪ್ರಾರ್ಥಿಸುತ್ತೇವೆ" ಎಂದಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಂಪೈರ್ಗಳು ಯಾರೆಂದು ಗೊತ್ತಾ?