ಮುಂಬೈನಲ್ಲಿ ದಸರಾ.. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಟ್ರಕ್ಗಳ ನಿಷೇಧ - ಸಂಚಾರ ಸುರಕ್ಷತೆ
🎬 Watch Now: Feature Video

ದಸರಾ ಹಬ್ಬದ ನಿಮಿತ್ತ ಸಂಚಾರ ಸುರಕ್ಷತೆ ನಿಯಂತ್ರಣದ ದೃಷ್ಟಿಯಿಂದ ಮುಂಬೈ ದಹಿಸರ್ ಚೆಕ್ ನಾಕಾದಲ್ಲಿ ದೊಡ್ಡ ಟ್ರಕ್ ವಾಹನಗಳು ಬರುವುದನ್ನು ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ ಬೆಳಗ್ಗೆ 10 ಗಂಟೆಯಿಂದ ಟ್ರಾಫಿಕ್ ಪೊಲೀಸರಿಂದ ಭಾರಿ ಬಂದೋಬಸ್ತ್ ಮಾಡಲಾಗಿದೆ. ಈ ಕುರಿತು ಸಂಚಾರಿ ಪೊಲೀಸ್ ಅಧಿಕಾರಿ ಪ್ರಶಾಂತ್ ಕಿಣಿ ಮಾತನಾಡಿ, ಇಂದು ಮುಂಬೈನಲ್ಲಿ ದಸರಾ ಇದ್ದು, ಬಿಕೆಸಿ, ಶಿವಾಜಿ ಪಾರ್ಕ್‌ನಲ್ಲಿ ಸಮಾವೇಶವಿದೆ. ಸಂಚಾರ ಸುರಕ್ಷತೆ ದೃಷ್ಟಿಯಿಂದ ಮುಂಬೈನಲ್ಲಿ ದೊಡ್ಡ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದರು.
Last Updated : Feb 3, 2023, 8:28 PM IST