ದೆಹಲಿಯ ಹಲವೆಡೆ ಭಾರಿ ಮಳೆ: ವಾರಾಂತ್ಯದಲ್ಲಿ ಮತ್ತಷ್ಟು ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ - ಭಾರತೀಯ ಹವಾಮಾನ ಇಲಾಖೆ
🎬 Watch Now: Feature Video
ನವದೆಹಲಿ: ಶನಿವಾರ ಬೆಳಗ್ಗೆಯಿಂದ ದೆಹಲಿಯ ಹಲವು ಭಾಗಗಳು, ನೋಯ್ಡಾ ಸೇರಿದಂತೆ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ವಾತಾವರಣ ತಂಪಾಗಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪಮಾನದಿಂದ ಜನರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಆದರೆ, ಇನ್ನೊಂದೆ ಅತಿಯಾದ ಮಳೆಯಿಂದ ನಗರದ ಹಲವೆಡೆ ನೀರು ನಿಂತು ಜನರು ಪರದಾಡುವಂತಾಗಿದೆ.
ಮಧ್ಯ ಮತ್ತು ದಕ್ಷಿಣ ದೆಹಲಿ, ಗಾಜಿಯಾಬಾದ್, ಗುರುಗ್ರಾಮ್ ಹಾಗೂ ನೋಯ್ಡಾದ ಕೆಲವು ಭಾಗಗಳಲ್ಲಿ ಭಾರೀ ಮಳೆ ದಾಖಲಾಗಿದ್ದು, ಜಲಾವೃತದಿಂದಾಗಿ ಗುರುಗ್ರಾಮ್ ಸೇರಿದಂತೆ ಹಲವೆಡೆ ಶನಿವಾರ ಸಂಚಾರ ಅಸ್ತವ್ಯಸ್ತಗೊಂಡು, ಜನರನ್ನು ಸುಸ್ತಾಗಿಸಿದೆ.
ನವದೆಹಲಿಯ ಕಂಝವಾಲಾ, ದೆಹಲಿ ವಿಶ್ವವಿದ್ಯಾಲಯ ಹಾಗೂ ಪಂಜಾಬಿ ಬಾಗ್ ಸೇರಿದಂತೆ ದೆಹಲಿಯ ಹಲವೆಡೆ ಗುಡುಗು ಸಹಿತ ಭಾರಿ ತೀವ್ರತೆಯ ಮಳೆಯಾಗಲಿದೆ. ಗಂಟೆಗೆ 30-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದಕ್ಕೂ ಮುನ್ನ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಆಗಸ್ಟ್ 19 ರಿಂದ 23 ರವರೆಗೆ ಮಧ್ಯಮ ತೀವ್ರತೆಯ ಮಳೆಯೊಂದಿಗೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಶುಕ್ರವಾರ ಹವಾಮಾನ ಇಲಾಖೆ ನೀಡಿತ್ತು.
ಇದನ್ನೂ ನೋಡಿ : ಅಯೋಧ್ಯಾ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ - ವಿಡಿಯೋ