ಮಲೆನಾಡಿಗೆ ತಂಪೆರೆದ ಮಳೆರಾಯ; ವಿಪರೀತ ಸೆಖೆಯಿಂದ ಕೊಂಚ ನಿರಾಳರಾದ ಜನತೆ - ಗುಡುಗು ಸಹಿತ ಮಳೆ
🎬 Watch Now: Feature Video
ಶಿವಮೊಗ್ಗ: ಬಿಸಿಲಿನಿಂದಾಗಿ ಕಾದ ಕಾವಲಿಯಂತಾಗಿದ್ದ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿಂದು ಮಳೆ ಸುರಿಯಿತು. ಗುಡುಗು ಸಹಿತ ಮಳೆಯಾಯಿತು. ವಿಪರೀತ ಸೆಖೆಯಿಂದ ಕಂಗೆಟ್ಟಿದ್ದ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇಂದು ಮಧ್ಯಾಹ್ನ ವಿಪರೀತ ಬಿಸಿಲಿತ್ತು. ಆದರೆ, ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು.
ಗಾಳಿ, ಗುಡುಗು ಸಹಿತ ಜೋರಾಗಿ ಮಳೆ ಸುರಿಯಿತು. ಇದರಿಂದಾಗಿ ಕಾದು ಕೆಂಡವಾಗಿದ್ದ ನಗರದಲ್ಲಿ ತಂಪು ವಾತಾವರಣ ನಿರ್ಮಾಣವಾಗಿದೆ. ಕಳೆದ ಕೆಲವು ದಿನಗಳಿಂದ ಬಿಸಿಲಿನ ಧಗೆಗೆ ಶಿವಮೊಗ್ಗ ಜಿಲ್ಲೆಯ ಜನರು ಹೈರಾಣಾಗಿದ್ದರು. ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು.
ಭಾರಿ ಸೆಖೆ, ಧಗೆಯಿಂದಾಗಿ ಜನರು ಸಂಕಷ್ಟು ಅನುಭವಿಸುತ್ತಿದ್ದರು. ಹಲವು ಆರೋಗ್ಯ ಸಮಸ್ಯೆಗಳು ಕೂಡಾ ಉಂಟಾಗಿ ಆಸ್ಪತ್ರೆಗೆ ಅಲೆಯುವಂತಾಗಿತ್ತು. ದಾಹ ನೀಗಿಸಿಕೊಳ್ಳಲು ತಂಪು ಪಾನೀಯ, ಎಳನೀರು, ಏರ್ ಕೂಲರ್, ಫ್ಯಾನುಗಳ ಮೊರೆ ಹೋಗಿದ್ದರು. ಈಗ ಮಳೆ ಆಗಿದ್ದು ಶಿವಮೊಗ್ಗ, ಭದ್ರಾವತಿಯಲ್ಲಿ ಕೂಲ್ ಕೂಲ್ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: ರಾಜಕೀಯ ಜೀವನ ಆರಂಭಿಸಿದ ಅಂಬಾಸಿಡರ್ ಕಾರನ್ನ ಮತ್ತೊಮ್ಮೆ ಏರಿದ ಬಿಎಸ್ವೈ.. ಏನಿದರ ವಿಶೇಷತೆ?