ಬೆಂಗಳೂರಲ್ಲಿ ವರುಣನ ಅವಾಂತರ.. ಮನೆಗಳಿಗೆ ನುಗ್ಗಿದ ನೀರು ! - ಬೆಂಗಳೂರಲ್ಲಿ ವರುಣನ ಅವಾಂತರ
🎬 Watch Now: Feature Video
ಬೆಂಗಳೂರು ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಗರದಲ್ಲಿನ ವರುಣನ ಆರ್ಭಟ ಜೋರಾಗಿರುವುದು ಹಬ್ಬದ ತಯಾರಿಯ ಸಂಭ್ರಮಕ್ಕೆ ಬ್ರೇಕ್ ಹಾಕಿದೆ. ಹಲವಾರು ಮನೆಗಳಿಗೆ ನೀರು ನುಗ್ಗಿತ್ತು. ಜೊತೆಗೆ ಟ್ರಾಫಿಕ್ ಜಾಮ್ ಉಂಟಾಗಿ ಆಟೋ, ದ್ವಿಚಕ್ರ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಮಲ್ಲೇಶ್ವರಂ 8ನೇ ಕ್ರಾಸ್ನಲ್ಲಿ ಮರದ ಕೊಂಬೆ ಮುರಿದು ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
Last Updated : Feb 3, 2023, 8:27 PM IST